ಕಡುಬಡತನದ ನಡುವೆ ಸಾಧನೆಗೈದ ಪ್ರತಿಭೆ
ಯಾದವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಸವಂತ ಮಹಾಲಿಂಗಪುರ
ಮೂಡಲಗಿ: ಮೂಡಲಗಿ ತಾಲೂಕಿನ ಗುಲಗೊಂಜಿಕೊಪ್ಪ ಬಾಲಕ ಹಾಗೂ ಯಾದವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ
ಕಡು ಬಡತನದಲ್ಲಿ ಬಸವಂತ ಶಾಸಪ್ಪಾ ಮಹಾಲಿಂಗಪುರ 625ಕ್ಕೆ 623 (ಶೇ.99.68)ಅಂಕಗಳನ್ನು ಪಡೆಯುವುದರ ಮೂಲಕ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುತ್ತಾನೆ.
ಮೂಡಲಗಿ ತಾಲೂಕಿನ ಗಡಿಗ್ರಾಮದ ಗುಲಗಂಜಿಕೊಪ್ಪ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿಯ ತಂದೆ ಶಾಸಪ್ಪಾ ಮತ್ತು ತಾಯಿ ಲಕ್ಕವ್ವ ಕೃಷಿ-ಕೂಲೀ ಕಾರ್ಮಿಕರಾಗಿದ್ದು ಅತ್ಯಂತ ಕಡು ಬಡತನದ ಪರಿಸ್ಥಿತಿಯಲ್ಲಿಯೂ ಮಗನಿಗೆ ಉತ್ತಮ ಪ್ರೋತ್ಸಾಹ ನೀಡಿ ಶಿಕ್ಷಣ ಕೊಡಿಸಿದ್ದು, ಪ್ರಾಥಮಿಕ ಹಂತದಿಂದಲೂ ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡಾಪಟುವಾಗಿಯೂ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ, ತನ್ನ ಬಹುಮುಖ ಪ್ರತಿಭೆ ವ್ಯಕ್ತಪಡಿಸಿರುತ್ತಾನೆ.
ಪ್ರತಿಭಾವಂತ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಮೂಡಲಗಿ ವಲಯದ ಬಿಇಒ ಅಜಿತ ಮನ್ನಿಕೇರಿ ಅವರು ವಿದ್ಯಾರ್ಥಿಯ ಸ್ವಗ್ರಾಮವಾದ ಗುಲಗಂಜಿಕೊಪ್ಪದ ಮನೆಗೆ ಭೇಟಿ ನೀಡಿ ಶುಭ ಹಾರೈಸಿ, ವಿದ್ಯಾರ್ಥಿ ಹಾಗೂ ತಂದೆ-ತಾಯಿಗಳಿಗೆ ಸತ್ಕರಿಸಿ ಮಗುವಿನ ಉನ್ನತ ಶೈಕ್ಷಣಿಕ ಭವಿಷ್ಯದ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂಧರ್ಭದಲ್ಲಿ ಸಾಧಕ ವಿದ್ಯಾರ್ಥಿ ಬಸವಂತ ಶಾಸಪ್ಪಾ ಮಹಾಲಿಂಗಪುರ ವೈದ್ಯನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದು ಗ್ರಾಮದ ಗಣ್ಯಮಾನ್ಯರು ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಜಿ.ಎಮ್.ಸಕ್ರಿ, ಶಿಕ್ಷಕರು, ಸಿ.ಆರ್.ಪಿ ವ್ಹಿ.ಆರ್.ಬರಗಿ, ಕೊಪದಟ್ಟಿ ಪ್ರೌಢಶಾಲಾ ಶಿಕ್ಷಕರು, ಕಾಮನಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಸದಾಶಿವ ದುರಗನ್ನವರ, ಹಿರಿಯರಾದ ಸಿದ್ದಪ್ಪಾ ಲ. ಮಹಾಲಿಂಗಪುರ, ಪತ್ರೆಪ್ಪಾ. ದು.ಎಮ್ಮೆ, ಭೀಮಪ್ಪಾ ಕ. ಆರೆನ್ನವರ, ಯಾದವಾಡ, ಕಾಮನಕಟ್ಟಿ, ಗುಲಗಂಜಿಕೊಪ್ಪ ಗ್ರಾಮದ ಶಿಕ್ಷಣ ಪ್ರೇಮಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿಗೆ ಶುಭ ಹಾರೈಸಿ ಅಭಿನಂದಿಸಿದರು.