Breaking News
Home / Recent Posts / ಜುಲೈ-2021ರ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ

ಜುಲೈ-2021ರ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ

Spread the love

ಜುಲೈ-2021ರ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ವಿವರ

ಮೂಡಲಗಿ: ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಡು ಮಕ್ಕಳು 3613, ಹೆಣ್ಣು 3136 ಒಟ್ಟು 6749 ಮಕ್ಕಳಲ್ಲಿ ಗಂಡು 3611, ಹೆಣ್ಣು 3132ಒಟ್ಟು 6743 ಮಕ್ಕಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ ಫಲಿತಾಂಶ 99.9%ರಷ್ಷಾಗಿದ್ದು, ತಾಲೂಕಿನ ಐವರು 623 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ, ಆರು ಜನ 621 ದ್ವಿತೀಯ, ಓರ್ವ 620 ಅಂಕಗಳಿಸಿ ತೃತೀಯ ಸ್ಥಾನ ಗಳಿಸಿ ವಲಯದ ಫಲಿತಾಂಶ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೇದ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಂಡಳಿಯ ನಿಯಮಾನುಸಾರ ಫಲಿತಾಂಶದ ವಿಶ್ಲೇಷಣೆ ಶಾಲಾವಾವಾರು ಮಾಹಿತಿ ಕಲೆ ಹಾಕಲಾಗಿದೆ. ವಲಯದ 78 ಶಾಲೆಗಳು ಎ ಗ್ರೇಡ್ ಪಡೆದುಕೊಂಡಿವೆ. 4483 ಮಕ್ಕಳು ಎ+, 1933 ಮಕ್ಕಳು ಎ, 312 ಮಕ್ಕಳು ಬಿ, 15 ಮಕ್ಕಳು ಸಿ ಗ್ರೇಡ್‍ನಲ್ಲಿ ಉತ್ತೀರ್ಣವಾಗಿವೆ. ವಲಯಕ್ಕೆ ಪ್ರಥಮ ಬಂದಿರುವ ಅಶ್ವಿನಿ ಕರಿತವ್ಮ್ಮ, ಸೃಷ್ಠಿ ಜೋಡಟ್ಟಿ, ಜ್ಞಾನೇಶ್ವರ ಮಲ್ಲಾಪೂರ, ಪ್ರಜ್ವಲ ಮಗದುಮ್, ಬಸವಂತ ಮಹಾಲಿಂಗಪೂರ ಅವರ ಖುದ್ದಾಗಿ ಮನೆ ಭೇಟಿ ನೀಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ನೀಡಿ ಸತ್ಕರಿಸಿರುವದಾಗಿ ತಿಳಿಸಿದ್ದಾರೆ.


Spread the love

About inmudalgi

Check Also

ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ