ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಇದುವರೆಗೆ 38 ಪ್ರಕರಣ ದಾಖಲಾಗಿದೆ. ಈಗ ಮತ್ತೆ ಹೊಸ 10 ಪ್ರಕರಣ ಬೆಳಕಿಗೆ ಬಂದಿವೆ. ಇದು ರಾಜ್ಯ ದಲ್ಲೇ ಆತಂಕಕಾರಿ ಬೆಳವಣಿಗೆ.
ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ(ಮೇ 8) ಮತ್ತೆ 11 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಹೆಲ್ತ್ ಬುಲೆಟಿನ್ ದೃಢಪಡಿಸಿದೆ. ಈ ಮೂಲಕ ಬೆಳಗಾವಿ ಪಾಲಿಗೆ ಶುಕ್ರವಾರ ಅಶುಭವಾಗಿವೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹತ್ತು ಜನರಿಗೆ ಕುಡಚಿ ಗ್ರಾಮದ ಓರ್ವರಿಗೆ ಸೋಂಕು ತಗುಲಿದೆ.
ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750 ಕ್ಕೆ ಏರಿದೆ. ಇಂದು ಒಂದೇ ದಿನ 45 ಹೊಸ ಕೇಸುಗಳು ದಾಖಲಾಗಿವೆ.
IN MUDALGI Latest Kannada News