ಮೂಡಲಗಿ: ಬೆಳಗಾವಿ ಜಿಲ್ಲಾ ಹಾಲು ಮತ ಮಹಾಸಭಾದಿಂದ ಮೂಡಲಗಿ ಶಿಕ್ಷಣ ವಲಯದ ಸುಮಾರು 270 ಸರ್ಕಾರಿ ಶಾಲೆಗಳಿಗೆ ಕ್ರಾಂತಿವೀರ ಸಂಗೋಳಿ ರಾಯಣ್ಣನ ಭಾವಚಿತ್ರಗಳನ್ನು ಬಿಇಓ ಅಜೀತ ಮನ್ನಿಕೇರಿಯರ ಮುಖಾಂತರ ಹಸ್ತಾಂತರಿಸಲಾಯಿತ್ತು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡ ಅರವಿಂದ್ರ ದಳವಾಯಿ ಮಾತನಾಡಿ, ಬ್ರಿಟೀಷರ ವಿರುದ್ದ ತೊಡೆತಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ರಾಯಣ್ಣ ಹುಟ್ಟಿದ ದಿನವೇ ಸ್ವಾತಂತ್ರ್ಯ ದಿನಾಚಾರಣೆ ಹಾಗೂ ಅವರ ಹುತಾತ್ಮರಾದ ದಿನ ಜ.26 ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಆ ದಿನದಂದು ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ಮರಣೆ ಮಾಡಲು ಭಾವಚಿತ್ರಗಳನ್ನು ಮೂಡಲಗಿ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗಿತ್ತಿದೆ ಎಂದರು.
ಸಂಗೊಳ್ಳಿ ರಾಯಣ್ಣನ ಭಾವಚಿತ್ರಿಗಳನ್ನು ಸ್ವೀಕರಿಸಿ ಮಾತನಾಡಿದ ಅಜೀತ ಮನ್ನಿಕೇರಿಯವರು, ಹಾಲು ಮತ ಮಹಾಸಭಾದಿಂದ ಸರ್ಕಾರಿ ಶಾಲೆಗಳಿಗೆ ರಾಯಣ್ಣನ ಭಾವಚಿತ್ರಗಳನ್ನು ವಿತರಿಸುತ್ತಿರು ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಹಾಲ ಮತದ ಮಹಾಸಭಾದ ಈರಣ್ಣ ಮೋಡಿ, ಸಿದ್ದು ಮರರ್ಡಿ, ಸಂತೋಷ ಕಮಟ್ಟಿ, ಸಿದ್ದಣ್ಣ ದುರದುಂಡಿ, ಮೂಡಲಗಿ ತಾಲೂಕಾ ಕುರಬ ಸಂಘಧ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಹಾಗೂ ಅನೇಕರು ಉಪಸ್ಥಿತರಿದ್ದರು.
