Breaking News
Home / Recent Posts / ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Spread the love

ಮೂಡಲಗಿ: ಇತಿಹಾಸವನ್ನು ಮತ್ತೆ ಮತ್ತೆ ನನಪಿಸಿಕೊಳ್ಳುತ್ತಾ, ಸ್ವಾತಂತ್ರದ ಅಮೃತ ಮಹೋತ್ಸವದ ಅಮೃತಗಳಿಗೆಯ ಹೊಸ್ತಿಲಲ್ಲಿ ನಿಂತಿರುವ ದೇಶವಾಸಿಗಳು ಮಾಡಬೇಕಾದ ಯೋಚನೆ, ಯೋಜನೆಯ ಜೊತೆಗೆ ಅನ್ಯ ದೇಶಗಳು ಭಾರತವನ್ನು ನೋಡುತ್ತಿರುವ ಸ್ವರೂಪದ ಬಗ್ಗೆಯೂ ನಾವು ಹೇಳಬೇಕಿದೆ. ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಮುಂದೆ ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರವಿವಾರ ಆ. 15 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಇದರ ಆಡಳಿತ ಮಂಡಳಿ ಕಛೇರಿ ಮೇಲೆ 75ನೇ ಸ್ವಾತಂತ್ರೋತ್ಸದ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ನವಭಾರತದ ಪರಿಕಲ್ಪನೆಯ ಕನಸನ್ನು ಹೊತ್ತು ಮುನ್ನಡೆದಿರುವ ದೇಶದ ಈಗಿನ ಸಮರ್ಥ ನಾಯಕತ್ವವು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಚೀನಾ, ಪಾಕಿಸ್ತಾನದ ವೈರತ್ವವನ್ನೇ ಸೇತುವಾಗಿಸಿಕೊಂಡು ಇಂದು ಕಮ್ಯೂನಿಷ್ಟ್ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡುತ್ತಿದೆ. ನಮ್ಮ ಯೋಧರಿಗೆ ಬುಲೇಟ್ ಪ್ರೋಪ್ ಜಾಕೆಟ್ ಕೂಡ ಇಲ್ಲದ ಆ ಕಷ್ಟದ ಸಮಯವನ್ನು ದಾಟಿ ಬಂದಾಗಿದೆ. ಸೈನಿಕರು ಗಡಿ ಕಾಯುತ್ತಾರೆ, ಆಡಳಿತ ನಡೆಸುವರು ಗಾಜಿನ ಮನೆಯಲ್ಲಿ ಕುಳಿತಿರ್ತಾರೆ ಎನ್ನುವ ಮಾತು ಇದೀಗ ಸುಳ್ಳಾಗಿದೆ. ಸ್ವತಃ ಪ್ರಧಾನಿಗಳೇ ಈಗ ಯೋಧರ ಬಳಿ ತೆರಳಿ ದೀಪಾವಳಿ ಆಚರಿಸುವ ಭಾವನಾತ್ಮಕ ಕ್ಷಣಗಳನ್ನು ಕಣ್ತುಂಬಿಕೊಂಡಾಗಿದೆ ಎಂದರು

ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೋಸಬಾಳ ನಿರ್ದೇಶಕರಾದ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ ಸಿದ್ದಪ್ಪ ಹೆಬ್ಬಾಳ, ಸಹದೇವ ಹೆಬ್ಬಾಳ, ಬಾಳಪ್ಪ ಸಂಗಟಿ, ಮಾರುತಿ ಮಕ್ಕಳಗೇರಿ, ಪ್ರಮುಖರಾದ ಅಡಿವೇಪ್ಪ ಕುರಬೇಟ, ಶಂಕರ ಗೋರೋಶಿ, ತುಕಾರಾಮ ಪಾಲ್ಕಿ, ಗುರುನಾಥ ಮದಬಾಂವಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಗೋಪಾಲ ಜಾಲರ, ಬಸವರಾಜ ದಾಸನಾಳ, ಮಲ್ಲಪ್ಪ ಹೆಬ್ಬಾಳ, ಪ್ರ.ವ್ಯವಸ್ಥಾಪಕರಾದ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕರು ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

 


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ