ಯಾದವಾಡ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಸರ್ಕಾರಿ ಪೂರ್ವ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೊತ್ಸವ ಕಾರ್ಯಕ್ರಮವನ್ನು ವಿμÉೀಷವಾಗಿ ಆಚರಿಸಲಾಯಿತು.
ಭಾರತಾಂಬೆ ಭಾವ ಚಿತ್ರಕ್ಕೆ ಎಸ್.ಡಿ.ಎಮ್.ಸಿ. ಅಧ್ಯಕ್ಷ ನಾಗಪ್ಪ ಬಳಿಗಾರ ಇವರು ಪೂಜೆ ಸಲ್ಲಿಸಿ ದ್ವಜಾರೋಹಣ ನೆರವೇರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ಕುರುಬಚನಾಳ ಮತ್ತು ಡಾ: ಹಣಮಂತ ಚಿಕ್ಕೇಣ್ಣವರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯು ತ್ಯಾಗ ಹಾಗೂ ಬಲಿದಾನಗಳಿಂದ ದೊರೆತಿದ್ದು ನಾವೆಲ್ಲರೂ ಸೇರಿ ಸಮಾಜದ ಒಳಿತಕ್ಕಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಾದವಾಡ ಗ್ರಾಮದ ಎಸ್.ಎಸ್.ಎಲ್.ಸಿ. 2021 ರಲ್ಲಿ ಉನ್ನತ ಅಂಕಗಳನ್ನು ಪಡೆದು ಉತ್ತೀರ್ಣರಾದ ರಾಕೇಶ ಮಳ್ಳಿಮಠ ವಿದ್ಯಾರ್ಥಿಯನ್ನು ಮತ್ತು ವಿಜ್ಞಾನದ ಪ್ರಯೋಗ ಕನಕಿ ಪುಡಿಯಲ್ಲಿ ಕಸರತ್ತು ಈ ವಿಷಯಕ್ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಆದಿತ್ಯ ಇತಾಪಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಸುನಂದಾ ಬೆಳಗಲಿ, ಯಾದವಾಡ ಗ್ರಾ.ಪಂ ಸದಸ್ಯೆ ರೇಣುಕಾ ಇತಾಪಿ ಡಾ: ಹಣಮಂತ ಚಿಕ್ಕೇಣ್ಣವರ , ಶಾಲೆಯ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಉಪಸ್ಥಿತರಿದ್ದರು.