Breaking News
Home / Recent Posts / ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತ: ರಮೇಶ ಹಾಲಣ್ಣವರ

ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತ: ರಮೇಶ ಹಾಲಣ್ಣವರ

Spread the love

ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತ: ರಮೇಶ ಹಾಲಣ್ಣವರ

ಬೆಟಗೇರಿ:ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ರಮೇಶ ಹಾಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಆಶ್ರಯದಲ್ಲಿ ರವಿವಾರ ಆ.15 ರಂದು ನಡೆದ ಸಂಗೊಳ್ಳಿ ರಾಯಣ್ಣರವರ 224ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಒಬ್ಬ ಅಪ್ಪಟ ದೇಶ ಭಕ್ತರಾಗಿದ್ದರು. ರಾಯಣ್ಣನ ದೇಶ ಭಕ್ತಿಯನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸುರೇಶ ವಡೇರ ಅವರು, ಕ್ರಾಂತಿವೀರ ರಾಯಣ್ಣನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಗೌರವ ಸಮರ್ಪಣೆ ಕಾರ್ಯಕ್ರಮದ ಬಳಿಕ ಸಿಹಿ ವಿತರಿಸಲಾಯಿತು.
ಗ್ರಾ.ಪಂ ಸದಸ್ಯ ಅಶೋಕ ಕೋಣಿ, ಶಿವಾಜಿ ನೀಲಣ್ಣವರ, ವಿಠಲ ಕೋಣಿ, ವೀರಸಂಗಪ್ಪ ದೇಯಣ್ಣವರ, ಶ್ರೀಶೈಲ ಗಾಣಗಿ, ನಿಂಗಪ್ಪ ಕೋಣಿ, ಬಸವರಾಜ ಹುಚ್ಚಾಡಿ, ಸಂಭಾಜಿ ಕದಮ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಅಭಿಮಾನಿಗಳು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

Spread the loveಮೂಡಲಗಿ: ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ