ಮೂಡಲಗಿ : 21 ರಂದು ಮುಂಜಾನೆ 10ಗಂಟೆಗೆ ಮೂಡಲಗಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಕಾರ್ಮಿಕ ಅದಾಲತ ಜರುಗಲಿದೆ ಎಂದು ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ನಿರ್ದೇಶನದಂತೆ ಕಾರ್ಮಿಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಈ ಅದಾಲತ್‍ನಲ್ಲಿ ಉಪ ಕಾರ್ಮಿಕ ಆಯುಕ್ತರು ಪಾಲ್ಗೋಳ್ಳಲಿದ್ದು ಕಾರ್ಮಿಕರು ಕಾರ್ಮಿಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಇಲಾಖೆಯಿಂದ ಸಿಗುವ ಶೈಕ್ಷಣಿಕ, ಮದುವೆ, ಅಂತಿಮ ಸಂಸ್ಕಾರ ಪ್ರಮುಖ ವೈದ್ಯಕೀಯ ಪಿಂಚಣಿ ಧನ ಸಹಾಯ ಬಾಕಿ ಅರ್ಜಿಗಳು ಇದ್ದಲ್ಲಿ ಈ ಕಾರ್ಮಿಕ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಬಹುದು ಎಂದು ಕಾರ್ಮಿಕ ನಿರೀಕ್ಷಕ ಪಾಂಡುರಂಗ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Check Also
ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ
Spread the love ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …
IN MUDALGI Latest Kannada News