ಮೂಡಲಗಿ : 21 ರಂದು ಮುಂಜಾನೆ 10ಗಂಟೆಗೆ ಮೂಡಲಗಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಕಾರ್ಮಿಕ ಅದಾಲತ ಜರುಗಲಿದೆ ಎಂದು ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ನಿರ್ದೇಶನದಂತೆ ಕಾರ್ಮಿಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಈ ಅದಾಲತ್‍ನಲ್ಲಿ ಉಪ ಕಾರ್ಮಿಕ ಆಯುಕ್ತರು ಪಾಲ್ಗೋಳ್ಳಲಿದ್ದು ಕಾರ್ಮಿಕರು ಕಾರ್ಮಿಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಇಲಾಖೆಯಿಂದ ಸಿಗುವ ಶೈಕ್ಷಣಿಕ, ಮದುವೆ, ಅಂತಿಮ ಸಂಸ್ಕಾರ ಪ್ರಮುಖ ವೈದ್ಯಕೀಯ ಪಿಂಚಣಿ ಧನ ಸಹಾಯ ಬಾಕಿ ಅರ್ಜಿಗಳು ಇದ್ದಲ್ಲಿ ಈ ಕಾರ್ಮಿಕ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಬಹುದು ಎಂದು ಕಾರ್ಮಿಕ ನಿರೀಕ್ಷಕ ಪಾಂಡುರಂಗ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Check Also
*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ
Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …
IN MUDALGI Latest Kannada News