ಸ್ತ್ರೀ ಕುಲದ ಅನಗ್ರ್ಯ ರತ್ನ: ಹೇಮರಡ್ಡಿ ಮಲ್ಲಮ್ಮ-ಬಸವ ಸಮರ್ಥ ಮಹಾಸ್ವಾಮಿಗಳು
ಮೂಡಲಗಿ: ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಮಾದರಿಯಾಗಿರುವ ಹೇಮರಡ್ಡಿ ಮಲ್ಲಮ್ಮನವರ ಆದರ್ಶಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಗದಗ ಶಿರಂಜು ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಮೂಡಲಗಿ ತಾಲೂಕಿನ ಹಳೆಯರಗುದ್ರಿ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಮತ್ತು ಬಿಂದಿಗೆಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪಣೆ ಮತ್ತು ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭದ ಸಾನಿಧ್ಯತೆ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಮರೆಗುದ್ದಿಯ ಶ್ರೀ ಗುರುಪಾದೀಶ್ವರ ಮಹಾಸ್ವಾಮಿಗಳು, ಕೊಣ್ಣುರದ ಡಾ. ವಿಶ್ವಪ್ರಭುದೇವಾ ಶಿವಾಚಾರ್ಯ ಶ್ರೀಗಳು, ಹೊಸಯರಗುದ್ರಿಯ ಶ್ರೀ ಸಿದ್ದಪ್ರಭು ಶಿವಾಚಾರ್ಯ ಶ್ರೀಗಳು, ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ರಡ್ಡಿ ಅಧ್ಯಕ್ಷ ರಾಮಣ್ಣ ಮುಳ್ಳೂರ, ಗೋಕಾಕ ತಾಲೂಕಾ ರಡ್ಡಿ ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿದರು,
ಸಮಾರಂಭದ ವೇದಿಕೆಯಲ್ಲಿ ನಾವಲಗಿಯ ವೇದಮೂರ್ತಿ ಶ್ರೀ ಶೈಲ ಮಹಾಸ್ವಾಮಿಗಳು ಹಾಗೂ ಶ್ರೀ ಗಂಗಾಧರ ಬಸಯ್ಯ ಹಿರೇಮಠ, ನೀರಾವರಿ ಇಲಾಖೆಯ ಅಭಿಯಂತರ ಶ್ರೀಕಾಂತ ಜಾಲಿಬೇರಿ, ಜಿ.ಪಂ.ಸದಸ್ಯ ಗೊವಿಂದ ಕೊಪ್ಪದ, ಗೋಕಾಕ ಟಿಎಪಿಸಿ ಎಂ ಎಸ್ ಅದ್ಯಕ್ಷ ಅಶೋಕ ನಾಯಕ, ಮಹಾಲಿಂಗಪ್ಪ ತಟ್ಟಿಮನಿ, ಕುಲಗೋಡದ ಬಸನಗೌಡ ಪಾಟೀಲ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವರಾಜ ರಂಜಣಗಿ ಸ್ವಾಗತಿಸಿದರು, ಅನಿಲ ಚೌರಡ್ಡಿ ವಂದಿಸಿದರು, ಆರ್.ಎಲ್.ಮಿರ್ಜಿ ಹಾಗು ಸುರೇಶ ಒಂಟಗೋಡಿ ನಿರೂಪಿಸಿದರು.