Breaking News
Home / Recent Posts / ಅರಭಾವಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆ

ಅರಭಾವಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆ

Spread the love

ಘಟಪ್ರಭಾ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ, ಕೇಂದ್ರ, ರಾಜ್ಯ ಸರ್ಕಾರದ ಸಾಧನೆ, ಬಿಜೆಪಿ ತತ್ವ ಸಿದ್ದಾಂತ ಅವಲೋಕಿಸಿ, ಶಿಕ್ಷಕರು ಮತ ನೀಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ವಿನಂತಿಸಿದರು.
ಶುಕ್ರವಾರ ಜೂ.10 ರಂದು ಅರಭಾವಿ ಪಟ್ಟಣದಲ್ಲಿ ನಡೆದ ವಿಧಾನ ಪರಿಷತ್ ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಸರ್ಕಾರ ಶಿಕ್ಷಕ ವೃಂದಕ್ಕೆ ಯುಜಿಸಿ ಸ್ಕೇಲ್ ಜಾರಿಗೆ ತಂದಿದೆ. ಸರಕಾರಿ ನೌಕರರ ಹಿತ ಕಾಪಾಡಲು 7ನೇ ವೇತನ ಪರಿಷ್ಕರಣೆ ಜಾರಿಗೆ ವಿಧಾನಪರಿಷತನಲ್ಲಿ ಸ್ಪಷ್ಟ ಬಹುಮತ ಬೇಕು. ಆದ್ದರಿಂದ ಶಿಕ್ಷಕರ ಮತಕ್ಷೇತ್ರದ ಅರುಣ ಶಹಾಪೂರ ಹಾಗೂ ಪದವೀಧರ ಕ್ಷೇತ್ರದ ಹನುಮಂತ ನಿರಾಣಿ ಅವರನ್ನು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅರಭಾವಿ ಪಟ್ಟಣ ಪಂಚಾಯತ ಸದಸ್ಯ ರಾಜು ಜೊಕ್ಕಾನಟ್ಟಿ, ಅರಭಾವಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಬಸವರಾಜ ಕಡಾಡಿ, ಕಲ್ಲೋಳಿ ಪಟ್ಟಣ ಪಂಚಾಯತ ಸದಸ್ಯ ಭಗವಂತ ಪತ್ತಾರ, ಹಣಮಂತ ಸಂಗಟಿ, ಪ್ರಭು ಕಡಾಡಿ, ಶಿವಪ್ಪ ಬಿ.ಪಾಟೀಲ, ಸುನೀಲ ಜಮಖಂಡಿ, ಭೀಮಶಿ ಬಂಗಾರಿ, ದುಂಡಪ್ಪ ನಿಂಗಣ್ಣವರ, ಶ್ರೀಕಾಂತ ಕೌಜಲಗಿ, ಸುರೇಶ ಮಠಪತಿ, ಶ್ರೀಶೈಲ ಪೂಜೇರಿ, ಬಸವರಾಜ ಗಾಡವಿ ಅಡಿವೆಪ್ಪ ಕುರಬೇಟ, ಬಾಳೇಶ ಸಕ್ರೆಪ್ಪಗೋಳ, ಪುಂಡಲಿಕ ಅರಭಾವಿ, ಚೇತನ ರಡೆರಟ್ಟಿ ಸೇರಿದಂತೆ ಮತದಾರರು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯಸಭಾ ಜನಸಂಪರ್ಕ ಕಾರ್ಯಾಲಯ ಕಲ್ಲೋಳಿಯಲ್ಲಿ ವಾಯುವ್ಯ ಪದವೀಧರರು ಮತ್ತು ಶಿಕ್ಷಕ ಮತದಾರ ಸಭೆ ನಡೆಯಿತು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ