Breaking News
Home / Recent Posts / ರಾಜ್ಯಪಾಲ ಗೆಹ್ಲೋಟ್‍ರನ್ನು ಅಭಿನಂದಿಸಿದ: ಸಂಸದ ಈರಣ್ಣ ಕಡಾಡಿ

ರಾಜ್ಯಪಾಲ ಗೆಹ್ಲೋಟ್‍ರನ್ನು ಅಭಿನಂದಿಸಿದ: ಸಂಸದ ಈರಣ್ಣ ಕಡಾಡಿ

Spread the love

ರಾಜ್ಯಪಾಲ ಗೆಹ್ಲೋಟ್‍ರನ್ನು ಅಭಿನಂದಿಸಿದ: ಸಂಸದ ಈರಣ್ಣ ಕಡಾಡಿ

ಮೂಡಲಗಿ: ರಾಜ್ಯದ ಜನ ಸಾಮಾನ್ಯರಿಗೆ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ ನಾನು ಆ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸೂಚಿಸುತ್ತೇನೆ ಎಂದು ರಾಜ್ಯಪಾಲ ಡಾ. ತಾವರಚಂದ ಗೆಹ್ಲೋಟ್ ಭರವಸೆ ನೀಡಿದರು.


ಸೋಮವಾರ ಬೆಂಗಳೂರಿನ ರಾಜ್ಯಭವನದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ರಾಜ್ಯಪಾಲರನ್ನು ಸೌಹಾರ್ದಯುತ ಭೇಟಿಯಾಗಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯಪಾಲರು ರಾಜ್ಯದ ಜನತೆಯ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದಲ್ಲಿ ಸಮಸ್ಯೆಗಳಿಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ರಾಜ್ಯದ ರೈತರ ಸಮಸ್ಯೆಗಳು, ಕೃಷಿ ಕಾನೂನುಗಳು, ಕಿಸಾನ ಸಮ್ಮಾನ ನಿಧಿ ಯೋಜನೆ ಹೀಗೆ ಹಲವಾರು ಯೋಜನೆಗಳ ಬಗೆ ಚರ್ಚೆ ನಡಿಸಿದ ರಾಜ್ಯಪಾಲರು ಅತ್ಯಂತ ವಿಶ್ವಾರ್ಹತೆಯಿಂದ ಕುಳಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲ ಡಾ. ತಾವರಚಂದ ಗೆಹ್ಲೋಟ್ ಅವರು ರಾಜ್ಯಸಭಾ ಸಭಾನಾಯಕರಾದ ಸಂದರ್ಭದಲ್ಲಿನ ಕಾರ್ಯಕಲಾಪಗಳ ಬಗೆಗಿನ ಅನುಭವಗಳನ್ನು ಮಲಕು ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೊಕೇಶಗೌಡ, ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಸಾದ, ಬಸವರಾಜ ಹುಳ್ಳೇರ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ