ಮೂಡಲಗಿಯ ಬಸವರಾಜ ಪತ್ರೇಪ್ಪ ಕಮತಗಿ ಅವರು ಚಿಕ್ಕೋಡಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಛೇರಿ ಸಹಾಯಕರಾಗಿ ಸುಧೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಯುಕ್ತ ಅವರನ್ನು ಸನ್ಮಾನಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಮ್, ವಿಭಾಗೀಯ ಸಂಚಾರಿ ಅಧಿಕಾರಿ ರಾಜಶೇಖರ ವಾಜಂತ್ರಿ, ಲೆಕ್ಕಾಧಿಕಾರಿ ಸಂಜಯ ಮಾಳಿ, ಸಹಾಯಕ ಆಡಳಿತಾಧಿಕಾರಿ ವಿದ್ಯಾ ಕಾಂಬಳೆ, ಸಹಾಯ ಸಂಚಾರ ವ್ಯವಸ್ಥಾಪಕ ಅಪ್ಪಣ್ಣ ಚಬ್ಬಿ ಹಾಗೂ ಕಚೇರಿ ಸಿಬ್ಬಂದಿ ಕಾರ್ಮಿಕರು ಉಪಸ್ಥಿತರಿದ್ದರು.
