Breaking News
Home / Recent Posts / ಬೀರೇಶ್ವರ ಸೊಸೈಟಿಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನೆರವಾಗಿದೆ- ಚಂದ್ರಪ್ಪ ಗುಲ್ಲ

ಬೀರೇಶ್ವರ ಸೊಸೈಟಿಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನೆರವಾಗಿದೆ- ಚಂದ್ರಪ್ಪ ಗುಲ್ಲ

Spread the love

ಗೋಕಾಕ:ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರ ದೂರದೃಷ್ಟಿಯಿಂದ ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನೆರವಾಗಿದೆ ಎಂದು ಗೋಕಾಕ ನಗರದ ಬೀರೇಶ್ವರ ಕೋ-ಆಪ್ ಸೊಸೈಟಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಚಂದ್ರಪ್ಪ ಗುಲ್ಲ ಹೇಳಿದರು.
ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯ ಗೋಕಾಕ ನಗರ ಶಾಖೆಯ ಸಿಬ್ಬಂದಿಗೆ ಶೇ 44ರಷ್ಟು ವೇತನ ಹೆಚ್ಚಳ ಮಾಡಿರುವ ಪ್ರಮಾಣ ಪತ್ರ ಸೋಮವಾರ ಸೆ.20ರಂದು ವಿತರಿಸಿ ಅವರು ಮಾತನಾಡಿದರು.
ಪ್ರವಾಹ ಮತ್ತು ಕರೊನಾ ಸಮಯದಲ್ಲಿ ಬೀರೇಶ್ವರ ಸಹಕಾರಿ ಸಂಘವು ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕ ಮತ್ತು ಶಿಸ್ತುಬದ್ಧ ಕರ್ತವ್ಯದಿಂದ ನಾಡಿನಾದ್ಯಂತ ಸ್ಥಾಪನೆಯಾಗಿರುವ ಬೀರೇಶ್ವರ ಸೊಸೈಟಿ ಶಾಖೆಗಳು ಆರ್ಥಿಕವಾಗಿ ಪ್ರಗತಿಯಲ್ಲಿವೆ. ಹೀಗಾಗಿ ಬೀರೇಶ್ವರ ಸೊಸೈಟಿ ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಿಸಲಾಗಿದೆ ಎಂದು ಗೋಕಾಕ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಚಂದ್ರಪ್ಪ ಗುಲ್ಲ ತಿಳಿಸಿದರು.
ಶಾಖಾ ವ್ಯವಸ್ಥಾಪಕ ಮಹಾಂತೇಶ ಬಿಸ್ಕೋಪ ಮಾತನಾಡಿ, ಕರೊನಾ 1 ಮತ್ತು 2ನೇ ಅಲೆಯಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ವೇತನ ಹೆಚ್ಚಿಸಿ ಸೊಸೈಟಿಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾನವಿತೆ ಮೆರೆದಿದ್ದಾರೆ ಎಂದರು.
ಮಹಾದೇವ ಕರಗಾಂವ, ಶಂಕರ ಖಂಡಗೋಳ, ರಾಮಪ್ಪ ಖಿಲಾರಿ, ಹಾಗೂ ಸ್ಥಳೀಯ ಬೀರೇಶ್ವರ ಕೋ-ಆಪ್ ಸೊಸೈಟಿ ಶಾಖೆಯ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಹಕರು ಇದ್ದರು.


Spread the love

About inmudalgi

Check Also

ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ

Spread the loveಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ