ಮೂಡಲಗಿ: ಇಲ್ಲಿನ ಗಂಗಾ ನಗರ ಹಾಗೂ ವಿವಿಧ ವಾರ್ಡುಗಳಲ್ಲಿ ಭಾರತೀಯ ಜನತಾ ಪಾರ್ಟಿ ಅರಭಾವಿ ಮಂಡಲ ಕಾರ್ಯಕರ್ತರು ಪಂಡಿತ ದೀನ ದಯಾಳ ಉಪಾಧ್ಯಯರ 105ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸುವುದರ ಮೂಲಕ ಆಚರಿಸಿದರು.
ಈ ವೇಳೆಯಲ್ಲಿ ದಲಿತ ಮುಖಂಡ ಪ್ರಕಾಶ ಮಾದರ ಮಾತನಾಡಿ, ಪಂಡಿತ ದೀನ ದಯಾಳರು ಏಕಾತ್ಮ ಮಾನವತಾವಾದದ ಪ್ರತಿಪಾದಕರಾಗಿದ್ದರು.ಭಾರತೀಯ ಜನ ಸಂಘವನ್ನು ಕಟ್ಟಿ ಅಪಾರ ಪ್ರಮಾಣದಲ್ಲಿ ಕಾರ್ಯಕರ್ತರ ಸಂಘಟನೆ ಮಾಡಿ ಪಕ್ಷದ ಕಾರ್ಯಕರ್ತರಿಗೆ ರಾಷ್ಟ್ರಾಭಿಮಾನ ಮೂಡಿಸಲು ಅಭ್ಯಾಸ ವರ್ಗ ಪ್ರಾರಂಭಿಸಿದರು.ಅವರೊಬ್ಬ ಖ್ಯಾತ ಪತ್ರಕರ್ತರು ಆಗಿ ಪಾಂಚಜನ್ಯ ಪತ್ರಿಕೆ ಪ್ರಾರಂಭಿಸಿದರು.ಅವರ ಪಕ್ಷನಿಷ್ಠೆ, ದೇಶ ಪ್ರೇಮದ ಗುಣಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಮಹಾಂತೇಶ ಕುಡಚಿ, ಸುರೇಶ ಅಂತರಗಟ್ಟಿ, ರಾಕೇಶ ಘಾಟಗೆ, ಶಿವಬಸು ಕಪರಟ್ಟಿ, ಈರಪ್ಪ ಢವಳೇಶ್ವರ, ಹಣಮಂತ ಸತರಡ್ಡಿ, ಕುಮಾರ ಗಿರಡ್ಡಿ, ಕೇದಾರಿ ಭಸ್ಮೆ, ಶಿವಬಸು ಬಂಡಿವಡ್ಡರ, ಪಾಂಡು ಮಹೇಂದ್ರಕರ, ಕೃಷ್ಣಾ ಗಾಡಿವಡ್ಡರ ಇನ್ನಿತರರು ಇದ್ದರು.
