ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಎಸ್.ಸಿ.ಎಸ್.ಟಿ ಹಾಸ್ಟೇಲ ಅವರಣದಲ್ಲಿ ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಪಜಾ.ಪಪ ವಿದ್ಯಾರ್ಥಿಗಳಿಗೆ ಇಂದು ಮುಂಜಾನೆ ಬಟ್ಟೆ, ಕ್ರಿಡಾ ಸಾಮಗ್ರಿ, ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಸರಕಾರ ನಿಮಗೆ ಸಕಲ ಸೌಕರ್ಯಗಳನ್ನು ನೀಡುತ್ತಿದೆ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರು ಶಿಕ್ಷಣಕ್ಕೆ ವಿಶೇಷ ಕಾಳಜಿ ಹೊಂದಿದ್ದಾರೆ ಅದರಿಂದ ಮೂಡಲಗಿ ವಲಯ ಶಿಕ್ಷಣ ಕ್ರಾಂತಿ ಮಾಡಿದೆ. ನಿÀಮ್ಮ ತಂದೆ ತಾಯಿ ಕಷ್ಟಪಟ್ಟು ದುಡಿದು ಮಕ್ಕಳು ನಾಡಿನ ಒಳ್ಳೇಯ ಪ್ರಜೆಯಾಗಲಿ ಎಂದು ನಿಮ್ಮನೂ ಹಾಸ್ಟೇಲಿಗೆ ಕಳಿಸಿದ್ದಾರೆ ಶ್ರೇದ್ಧೆಯಿಂದ ಶಿಕ್ಷಣ ಕಲಿಯಿರಿ ಎಂದರು ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ವಿತರಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ. ಸುನೀಲ ವಂಟಗೋಡಿ. ತಮ್ಮಣ್ಣಾ ದೇವರ. ಶ್ರೀಪತಿ ಗಣಿ.. ಶಂಕರ ಹಾದಿಮನಿ. ಗೋವಿಂದಪ್ಪ ಮಳಲಿ. ಹಾಸ್ಟೇಲ ವಾರ್ಡನ ರಾಜು ಗೋಲಬಾಂವಿ. ವ್ಹಿ.ಎಮ್. ಮಾಳಿ.ಎಸ್.ಕೆ ಕೊಲಕಾರ. ಬಿ.ಪಿ ಕೋಟಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.