ಮಹಾಲಕ್ಷ್ಮೀ ಸೊಸಾಯಿಟಿಗೆ 2.58ಕೋಟಿ ಲಾಭ-ಪ್ರಕಾಶ ನಿಡಗುಂದಿ
ಮೂಡಲಗಿ: ಪ್ರಧಾನ ಕಛೇರಿ ಸೇರಿ 10 ಶಾಖೆಗಳು ಪ್ರಗತಿಯಲ್ಲಿಯವೇ ಇದಕ್ಕೆ ಮೂಲ ಕಾರಣ ಶೇರುದಾರರು, ಠೇವಣಿದಾರರು, ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ಸಾಲಗಾರು, ಸಂಘವು ಪ್ರತಿ ವರ್ಷದಿಂದ ವರ್ಷಕ್ಕೆ ಅಭಿವೃದ್ದಿ ಹೊಂದುತ್ತಿದೆ ಎಂದು ಮಹಾಲಕ್ಷ್ಮಿ ಅರ್ಬನ್ ಕೊ ಆಪ್-ಕ್ರೆಡಿಟ್ ಸೊಸಾಯಿಟಿಯ ಉಪಾಧ್ಯಕ್ಷ ಡಾ ಪ್ರಕಾಶ ನಿಡಗುಂದಿ ಹೇಳಿದರು,
ಮಹಾಲಕ್ಷ್ಮಿ ಅರ್ಬನ್ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾಂಗಣದಲ್ಲಿ ಆಯೋಜಿಸಿದ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2.31.16.265 ಶೇರು ಬಂಡವಾಳ. 9.70.26.401 ನಿಧಿಗಳು 67.86.50.29 ಠೇವುಗಳು ಹೊಂದಿ 56.58.81.452 ಸಾಲ ವಿತರಣೆ ಮಾಡಿ ಮಾರ್ಚ ಅಂತ್ಯಕ್ಕೆ 2.58.60.977 ಲಾಭ ಗಳಿಸಿದೆ ಎಂದರು,
ಹಣಮಂತ ಪಾರ್ಶಿ, ಮಲ್ಲಪ್ಪ ಗಾಣಿಗೇರ ಮಾತನಾಡಿದರು.
ವೇದಿಕೆಯ ಮೇಲೆ ನಿರ್ದೆಶಕರಾದ ಮುತ್ತಪ್ಪ ಈರಪ್ಪನವರ, ಸಂತೋಷ ಪಾರ್ಶಿ,ಮಹಾದೇವ ಗೋಕಾಕ, ಸಾಂವಕ್ಕ ಶೆಕ್ಕಿ, ಭಾರತಿ ಪಾಟೀಲ್, ಗೌರವ್ವಾ ಪಾಟೀಲ್, ಶೋಭಾ ಕದಮ್,ಎಸ್.ವಾಯ್.ಹೊಸಟ್ಟಿ ಹಾಗೂ ಧರ್ಮರಾಜ ಪೂಳ, ಸಂತೋಷ ಹೊಸಮನಿ ಇದ್ದರು,
ಪ್ರಧಾನ ವವ್ಯಸ್ಥಾಪಕ ಚನಬಸು ಬಗನಾಳ ಸ್ವಾಗತಿಸಿದರು, ಹಣಮಂತ ದೇಸಾಯಿ ಲಾಭಹಾನಿ, ಸುಭಾಸ ಪುಟ್ಟಿ ಕ್ರೋಡಿಕರಣ, ಶ್ರೀರಂಗ ಜೋಷಿ ಲಾಭ-ಹಾನಿ ವಿಂಗಡನೆ, ವಿಜಯ ನಿಡಗುಂದಿ ವಾರ್ಷಿಕ ವರದಿ ಮಂಡಿಸಿದರು.
ಅರ್ಜುನ ಗಾಣಿಗೇರ ನಿರೂಪಿಸಿದರು, ವಿಧ್ಯಾಶ್ರೀ ಮುರಗೋಡ ವಂದಿಸಿದರು