ಅ. 18ರಂದು ದಿ. ಸಿದ್ದಣ್ಣ ಹೊರಟ್ಟಿ ಅವರಿಗೆ ‘ನುಡಿ ನಮನ’
ಮೂಡಲಗಿ: ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್, ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚೈತನ್ಯ ಗ್ರುಪ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಗ್ರುಪ್‍ದ ಸಂಸ್ಥಾಪಕರಾದ ದಿ. ಸಿದ್ದಣ್ಣ ಎಸ್. ಹೊರಟ್ಟಿ ಅವರಿಗೆ ಅ. 18ರಂದು ಮಧ್ಯಾಹ್ನ 2.30ಕ್ಕೆ ಚೈತನ್ಯ ಆಶ್ರಮ ವಸತಿ ಶಾಲೆಯ ಸಭಾಭವನದಲ್ಲಿ ‘ನುಡಿ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವರು.
ಸಿದ್ದಣ್ಣ ಹೊರಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರು ಭಾಗವಹಿಸಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.