Breaking News
Home / Recent Posts / ಸಾರ್ವಜನಿಕರು ಇಲಾಖೆ ಇಲಾಖೆಗಳಿಗೆ ಸುತ್ತಾಡದೇ ತಮ್ಮ ಕುಂದು ಕೊರತೆಗಳನ್ನು ಊರಿನಲ್ಲಿಯೇ ಬಗೆಹರಿಸಿಕೊಳ್ಳಿ- ತಹಶೀಲ್ದಾರ ಡಿ. ಜಿ.ಮಹಾತ

ಸಾರ್ವಜನಿಕರು ಇಲಾಖೆ ಇಲಾಖೆಗಳಿಗೆ ಸುತ್ತಾಡದೇ ತಮ್ಮ ಕುಂದು ಕೊರತೆಗಳನ್ನು ಊರಿನಲ್ಲಿಯೇ ಬಗೆಹರಿಸಿಕೊಳ್ಳಿ- ತಹಶೀಲ್ದಾರ ಡಿ. ಜಿ.ಮಹಾತ

Spread the love

ಮೂಡಲಗಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾಲೂಕಿನ ಸಂಗನಕೇರಿಯಲ್ಲಿ ಮೂಡಲಗಿ ತಾಲೂಕಾ ಆಡಳಿತದಿಂದ ಜರುಗಿತು.
ಕಾರ್ಯಕ್ರಮವನ್ನು ತಹಶೀಲ್ದಾರ ಡಿ. ಜಿ.ಮಹಾತ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಇಲಾಖೆ ಇಲಾಖೆಗಳಿಗೆ ಸುತ್ತಾಡದೇ ತಮ್ಮ ಕುಂದು ಕೊರತೆಗಳನ್ನು ಊರಿನಲ್ಲಿಯೇ ಬಗೆಹರಿಸಿಕೊಳ್ಳುವ ಸಲುವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ಊರಿಗೆ ಬಂದಿದ್ದಾರೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಬಗೆಹರಿಸಿಕೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹೆಸ್ಕಾಂ, ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ವಿಷಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮನ್ನಿಕೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುಜನಟ್ಟಿ , ತಾಲ್ಲೂಕು ಆರೋಗ್ಯಾಧಿಕಾರಿ ಎಮ್.ಎಸ್.ಕೊಪ್ಪದ, ಮುಖ್ಯಾಧಿಕಾರಿ ತುಕಾರಾಮ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಊರಿನ ಹಿರಿಯರಾದ ಬಸವರಾಜ ಮಾಳೇದ ಹಾಗೂ ನಜೀರ್ ಅಹ್ಮದ್ ಸೈಯದ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಲಾಯಿತು. ಸ್ಮಶಾನದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಸ್ಮಶಾನ ಭೂಮಿ ಬಗ್ಗೆ, ಮತದಾರ ಪಟ್ಟಿಯಲ್ಲಿ ಹೆಚ್ಚಿನ ವಾಡ9 ಸೇರಿಸುವ ಬಗ್ಗೆ, ಪಿಂಚಣಿ ಬಗ್ಗೆ, ಆಧಾರ್ ಕಾರ್ಡ್ ಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು ಹಾಗೂ ವಿಲೇವಾರಿಗೊಳಿಸಲಾಯಿತು. ಆರೋಗ್ಯ ಇಲಾಖೆಯಿಂದ ಉಚಿತವಾಗಿ ಶುಗರ್, ಬಿಪಿ, ಕಣ್ಣಿನ ಪೆÇರೆ ತಪಾಸಣೆ ಮಾಡಲಾಯಿತು ಹಾಗೂ ಕೋವಿಡ್ ಲಸಿಕೆಯನ್ನು ಹಾಕಲಾಯಿತು.
ಉಪ ತಹಶೀಲ್ದಾರ್ ಪರಸಪ್ಪ ನಾಯಿಕ ಸ್ವಾಗತಿಸಿ ನಿರೂಪಿಸಿದರು

 

 


Spread the love

About inmudalgi

Check Also

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

Spread the loveಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ