ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ
ಮೂಡಲಗಿ: ಕಿತ್ತೂರ ಚನ್ನಮ್ಮಳ ಶೌರ್ಯ, ಸಾಹಸ ಹಾಗೂ ದೇಶಾಭಿಮಾನವು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಆಚರಿಸಿದ ರಾಣಿ ಕಿತ್ತೂರ ಚನ್ನಮ್ಮಳ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ ಎಂದರು.
ರಾಣಿ ಚನ್ನಮ್ಮಳ ತ್ಯಾಗ, ಬಲಿದಾನ ಮತ್ತು ದೇಶಭಕ್ತಿಯು ಅನನ್ಯವಾಗಿದೆ. ಚನ್ನಮ್ಮಳ ಜಯಂತಿಯನ್ನು ಆಚರಿಸುವ ಜೊತೆಗೆ ಅವಳ ಧೈರ್ಯವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಾದ ಸುಭಾಷ ಕಾಂಬಳೆ, ಕೆಂಪಣ್ಣ ಮಕ್ಕಳಗೇರಿ, ಆಶಾ ಕಾರ್ಯಕರ್ತೆಯರು ಹಾಗೂ ಗಣ್ಯರು ಭಾಗವಹಿಸಿದ್ದರು.
IN MUDALGI Latest Kannada News