Breaking News
Home / ತಾಲ್ಲೂಕು / ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ, ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ.

ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ, ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ.

Spread the love

ಮೂಡಲಗಿ : ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ, ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ. ತಮ್ಮ ಕೆಲಸದಲ್ಲಿ ಯಾರು ಅಪ್ರಾಮಾಣಿಕತೆಯಿಂದ ಇರುತ್ತಾರೆ ಅವರು ಎಷ್ಟೇ ಹಣ ಹಣಗಳಿಸಿದರೂ ಅವರಿಗೆ ನೆಮ್ಮದಿ ಬದುಕು ಇರುವುದಿಲ್ಲ, ಮನುಷ್ಯ ಇಂದು ಕೇವಲ ಹಣ ಗಳಿಕೆಗೆ ಮಾತ್ರ ಸೀಮಿತನಾಗಿರುವುದರ ಜತೆಗೆ ಸ್ವಾರ್ಥಿಗಳಾಗಿದ್ದಾರೆ. ಕೇವಲ ತವು ಹಾಗೂ ತಮ್ಮ ಕುಟುಂಬಕ್ಕಷ್ಟೇ ಸೀಮಿತರಾಗಿದ್ದಾರೆ.


ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸಮಾಜ ಸೇವಾ ಮಾಡುವ ಯಾರು ಕೂಡಾ ಮುಂದೆ ಬರಲು ಹಿಂಜರಿಕೆ ಪಡುತ್ತಿದ್ದಾರೆ. ಕೆಲವರು ಅಧಿಕಾರ ಆಸೆಗಾಗಿ ಸಮಾಜ ಸೇವೆ ಮಾಡುವವರು ಒಂದು ಕಡೆಯಾದರೇ ಸಮಾಜ ಸೇವೆನೇ ಮೈಗೊಡಿಸಿಕೊಂಡ ಜನ ಇನ್ನೊಂದು ಕಡೆ. ಇರುವಾಗ ತಮ್ಮ ಜೀವನಕ್ಕೆ ಆಸರೆಯಾಗಿರುವ ಹಾಡುಗಾರಿಕೆಯನ್ನು ಬೀಟ್ಟು ಸಮಾಜ ಸೇವೆ ಮಾಡುತ್ತಿರುವ ಆ ವ್ಯಕ್ತಿಯ ಕಾರ್ಯ ಶ್ಲಾಘನೀಯ.

ಹೌದು ಮೂಡಲಗಿ ಪಟ್ಟಣದ ಶಿವಾಪೂರ ರೋಡ ( ಮೂಡಲಗಿ ನಾಕಾ) ನಿವಾಸಿಯಾದ ಮರೇಪ್ಪ ಮರೇಪ್ಪಗೋಳ ಇವರು ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟ ಸುಖ ನೋವುಗಳನ್ನು ಅನುಭವಿಸಿದ ವ್ಯಕ್ತಿ. 20ನೇ ವಯಸ್ಸಿನಿಂದಲೇ ಮದುವೆ ಸಮಾರಂಭಗಳಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ, ವಿವಿಧ ಹಳ್ಳಿಹಳ್ಳಿಗಳಿಗೆ ತಮ್ಮ ಸಂಗಡಿಗರೊಂದಿಗೆ ಕಾರ್ಯಕ್ರಮಗಳನ್ನು ನಡೆಸಿ ಬರುವಂತ ಹಣದಲ್ಲಿ ಜೀವನವನ್ನು ನಡೆಸುವಂತ ಪರಿಸ್ಥಿತಿ ಅವರದು.

ಆದರೆ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರಿಗೋಸ್ಕರ ಮಾಡುವಂತ ಕಾರ್ಯಗಳನ್ನು ಮನಗಂಡು ಶಾಸಕರನ್ನೇ ಮಾರ್ಗದರ್ಶಿಯಾಗಿರಿಸಿಕೊಂಡು ಸಮಾಜ ಸೇವೆ ಮಾಡುವ ಮನೋಭಾವನೆಯೊಂದಿಗೆ ಸಮಾಜದ ಹಿತಕ್ಕಾಗಿ ದುಡಿದು ಜನರ ವಿಶ್ವಾಸ ಗಳಿಸಿದಲ್ಲಿ ಅದಕ್ಕಿಂತ ಮಿಗಿಲಾದ ಶಕ್ತಿ ಬೇರಾವುದು ಬೇಕಾಗುವುದಿಲ್ಲ, ಸಮಾಜ ಸೇವೆಯಲ್ಲಿ ಅಂತಹ ಸಾಮರ್ಥ್ಯ ಇದೆ ಎಂಬ ನಂಬಿಕೆಯಿoದ ತಮ್ಮ ಹಾಡುಗಾರಿಕೆಯನ್ನು ಬಿಟ್ಟು ಸಮಾಜ ಸೇವೆ ಮಾಡಲು ಕ್ರಿಯಾಶೀಲರಾಗಿ ಮೊದಲಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಶಾಸಕರ ಮೆಚ್ಚುಗೆ ಪಡೆದು, ಶಾಸಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

ಮುಖ್ಯವಾಗಿ ಬೇಕಾದುದು ಸಮಾಜದ ಜನರ ವಿಶ್ವಾಸದ ಗಳಿಕೆ. ಇತ್ತೀಚಿನ ದಿನಗಳಲ್ಲಂತೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಅಪಾರ ಜಿವಹಾನಿ, ಆಸ್ತಿ ನಷ್ಟ ಇತ್ಯಾದಿ ಸಂಭವಿಸಿದಾಗ, ಹಾಗೂ ಇಡೀ ದೇಶದಲ್ಲೇ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಹಿನ್ನೆಲೆ ಅನೇಕ ಖ್ಯಾತನಾಮ ಉದ್ಯಮಗಳು, ಸಮಾಜದ ಗಣ್ಯರು ದೇಣಿಗೆ, ದಿನಸಿ ವಸ್ತುಗಳನ್ನು ಬಡ ಜನರಿಗೆ ಹಚ್ಚುವಂತ ಕೆಲಸ ಮಾಡುತ್ತಿದ್ದಾರೆ. ಆದರೆ ಮರೇಪ್ಪ ಅವರು ತಾನು ಏನನಾದರೂ ಬಡ ಜನರಿಗೆ ಸಹಯ ಮಾಡಬೇಕು ಎಂದು ಬಡ ಕುಟುಂಬಗಳಿಗೆ ಸಹ ದಿನಸಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ.

ಜನಸೇವೆಯೇ ಜನಾರ್ದನನ ಸೇವೆ ಎಂಬ ಗಾದೆಯು ಸಮಾಹ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಜ ಸೇವೆ ಮಾಡುತ್ತಿರುವ ಮರೇಪ್ಪ ಮರೇಪ್ಪಗೋಳ ಅವರ ಕಾರ್ಯ ಮಾತ್ರ ಶ್ಲಾಘನೀಯವಾದುದ್ದು.


 ಪ್ರತಿ ವ್ಯಕ್ತಿಯಲ್ಲೂ ತನ್ನದೆ ಆದ ಪ್ರತಿಭೆ ಇದ್ದೆ ಇರುತ್ತದೆ. ಜತೆಗೆ ಪ್ರತಿಭೆ ಅನಾವರಣಗೊಳ್ಳುವುದು ಇಂತಹ ಕಾರ್ಯಕ್ರಮದಿಂದಲೇ. ಯಾರನ್ನಾದರೂ ಬೆಟ್ಟು ಮಾಡುವ ಬದಲು ಅವರಿಗೆ ಅವಕಾಶ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಂಕಲ್ಪ ತೊಟ್ಟರೆ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ,

ಸಮಾಜ ಸೇವಕ ಮರೇಪ್ಪ ಮರೇಪ್ಪಗೋಳ


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ