Breaking News
Home / Recent Posts / ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

Spread the love


ಮೂಡಲಗಿ: ಪಟ್ಟಣದ ರ್ಸಾಜನಿಕ ಗ್ರಂಥಾಲಯದಲ್ಲಿ ಬುಧವಾರದಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥ ಅವರ ಭಾವ ಚಿತ್ರಕ್ಕೆ ಬಿಜೆಪಿ ದಲಿತ ಮುಖಂಡ ಪ್ರಕಾಶ ಮಾದರ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ನಕ ಯುಗದಲ್ಲಿ ಬಡ ವಿದ್ಯಾರ್ಥಿಗಳು ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗುತ್ತಿದ್ದು ಅಂತಹ ಬಡ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಉಚಿತವಾಗಿ ಪುಸ್ತಕಗಳನ್ನು ಪಡೆದು ತಮ್ಮ ಜ್ಞಾನಾರ್ಜನೆಯ ಮಟ್ಟವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಲು ಗ್ರಂಥಾಲಯಗಳಿಂದ ಅನುಕೂಲವಾಗುತ್ತದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಂಥಾಪಾಲಕ ಈರಪ್ಪ ಬಾಗೇವಾಡಿ ಮಾತನಾಡಿ, ಈಲ್ಲಿನ ಗ್ರಂಥಾಲಯದಲ್ಲಿ 12 ಸಾವಿರಕ್ಕೂ ಅಧಿಕ ಗ್ರಂಥಗಳಿವೆ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ದಾರಿ ದೀಪವಿದ್ದಂತೆ ಶೃದ್ಧೆಯಿಂದ ಓದಿ ತಮ್ಮ ಬಾವಿ ಜೀವನ ರೂಪಿಸಕೊಳ್ಳಬೇಕು ಎಂದರು.
ಸಮಾಜ ಸೇವಕ ಗುರು ಗಂಗನ್ನವರ ಮಾತನಾಡಿ, ಸಧ್ಯ ಗ್ರಂಥಾಲಯು ಡಿಜಿಟಲ್ ಗ್ರಂಥಾಲಯ ಆಗಿದ್ದು ಹೊಸ ಕಟ್ಟಡದ ಅವಸ್ಯವಿದೆ. ಈಗಿರುವ ಗ್ರಂಥಾಲಯವನ್ನು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿದೃಷ್ಟಿಯಿಂದ ಕಾಲೇಜು ರಸ್ತೆಗಿರುವ ಸರ್ಕಾರಿ ಶಾಲೆಯ ಆವರಣದಲ್ಲಿನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಹಾಗೂ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯ ಸದಸ್ಯತ್ವ ಪಡೆದುಕೊಳ್ಳಬೇಕೆಂದರು.
ಗ್ರಾಮಲೆಕ್ಕಾಧಿಕಾರಿ ಎ ಎಸ್ ಬಾಗವಾನ, ಧರ್ಮಟ್ಟಿ ಗ್ರಾಮಲೆಕ್ಕಾಧಿಕಾರಿ ಎಮ್ ಎಸ್ ರಾಜನ್ನವರ, ಗ್ರಂಥಾಲಯ ಸಿಬ್ಬಂದಿ ವೀಣಾ ಸಣ್ಣಕ್ಕಿ, ವಾದಿರಾಜ ದೇಸಾಯಿ, ಶಿವಲಿಂಗ ಖಾನಟ್ಟಿ, ಪತ್ರಕರ್ತರಾದ ಸುಭಾಸ ಕಡಾಡಿ, ಮಂಜು ರೇಳೆಕರ, ಶಿವಬಸು ಗಾಡವಿ ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ