ಶಿವಾನಂದ ಮುರಗೋಡಗೆ ಪಿಎಚ್.ಡಿ ಪದವಿ
ಮೂಡಲಗಿ: ಮೂಡಲಗಿಯ ಶಿವಾನಂದ ಜಿ. ಮುರಗೋಡ ಅವರು ‘ಹೆಲ್ತ್ ಲೈಬ್ರರಿ ಇನ್‍ಫಾರ್ಮೆಷನ್ ಸಿಸ್ಟಮ್ಸ್ ಆಂಡ್ ಸರ್ವಿಸಸ್ ಆಫ್ ಕೆಎಲ್‍ಇ ಯುನಿರ್ಸಿಟಿ ಆಂಡ್ ಯನಿವರ್ಸಿಟಿ ಸೈನ್ಸ್ ಮಲೇಶಿಯಾ ಎ ಸ್ಟಡಿ’ ವಿಷಯದಲ್ಲಿ ಮಂಡಿಸಿರುವ ಪ್ರಬಂಧವನ್ನು ಮನ್ನಿಸಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ.
ರಾಣಿ ಚನ್ನಮ್ಮ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಬಂಕಾಪುರ ಅವರು ಮುರಗೋಡ ಅವರ ಸಂಶೋಧನೆಗೆ ಮಾರ್ಗದರ್ಶನವನ್ನು ನೀಡಿದ್ದರು.
ಶಿವಾನಂದ ಅವರು ಸ್ಥಳೀಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಹಿರಿಯ ನಿರ್ದೇಶಕ ಜಿ.ಕೆ. ಮುರಗೋಡ ಅವರ ಪುತ್ರರಾಗಿದ್ದು, ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ 15 ವರ್ಷಗಳ ವರೆಗೆ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ.