ಹಳ್ಳೂರ: ದಾಸ ಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶಗಳು ಹಾಗೂ ಅವರ ಕೀರ್ತನೆಗಳನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೋಳಬೇಕು ಎಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಾರುತಿ ಮಾವರಕರ ಹೇಳಿದರು
ಅವರು ಹಳ್ಳೂರ ಗ್ರಾಮದ ಶ್ರೀ ಕನಕದಾಸ ಭವನದಲ್ಲಿ ಹಮ್ಮಿಕೋಂಡಿದ್ದ ಕನಕದಾಸ ಜಯಂತಿಯ ಮುಖ್ಯ ಅಥಿತಿಗಳಾಗಿ ಮಾತನಾಡಿ ಸಮಾಜ ಯುವ ಪ್ರತಿಭೆ ಸಿದ್ದಣ್ಣ ದುರದುಂಡಿ ಅವರು ನಿರಂತರವಾಗಿ ಮಾಡುವ ಕೆಲಸ ಕಾರ್ಯಗಳು ಶ್ಲಾಘನಿಯವಾಗಿದೆ ಎಂದರು.
ಹಾಲುಮತ ಸಮಾಜದ ಯುವ ಮುಖಂಡರಾದ ಸಿದ್ದಣ್ಣ ದುರದುಂಡಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕನಕದಾಸರ
ಕಿರ್ತನೆಗಳನ್ನು ನೆನಪಿಸುತ್ತಾ ಆಧ್ಯಾತ್ಮಿಕ ತತ್ವಗಳನ್ನು ಸರಳವಾಗಿ ಉಪದೇಶಿಸಿ ಸಮಾನತೆ ಭಕ್ತಿಭಾವ ಸಮಾಜಮುಖಿ ಆಧ್ಯಾತ್ಮ ಬೋಧನೆಗಳ ಮೂಲಕ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟ ದಾರ್ಶನಿಕ ಕವಿ ದಾಸಶ್ರೇಷ್ಠ ಶ್ರೀ ಕನಕದಾಸರರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಿ. ಕೆ. ಪಿ. ಎಸ್ ಅಧ್ಯಕ್ಷರಾದ ಸುರೇಶ ಕತ್ತಿ ಹಾಲುಮತ ಸಮಾಜದ ಹಿರಿಯರಾದ ವಿಠ್ಠಪ್ಪ ಮಗದುಮ್ ಮಲಕಾರಿ ಗೊಂಗಡಿ ಸತ್ತೆಪ್ಪಾ ಮರಿಚಂಡಿ ಮಹಾದೇವ ದುರದುಂಡಿ ರಮೇಶ ದುರದುಂಡಿ ಮಹಾರಾಜ ಸಿದ್ದು ಹಳ್ಳೂರ ಸಿದ್ದಪ್ಪಾ ದುರದುಂಡಿ ನವಿನ ಮಗದುಮ್ ಮಾದೇವ ದುರದುಂಡಿ ಚನ್ನಪ್ಪಾ ಹುರಕ್ಕಣ್ಣವರ ಸುಭಾಸ ಮರಿಚಂಡಿ ಹಾಗೂ ಸಮಾಜ ಗುರು ಹಿರಿಯರು ಯುವಕರು ಉಪಸ್ಥಿತರಿದ್ದರು.