Breaking News
Home / Recent Posts / ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, ಮೂಡಲಗಿ. ಕ್ರೀಡೆಯಲ್ಲಿ ಸಾಧನೆ

ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, ಮೂಡಲಗಿ. ಕ್ರೀಡೆಯಲ್ಲಿ ಸಾಧನೆ

Spread the love

ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, ಮೂಡಲಗಿ.
ಕ್ರೀಡೆಯಲ್ಲಿ ಸಾಧನೆ

2021 ನವೆಂಬರ್ 23,24 ರಂದು ಘಟಪ್ರಭಾದ ಶ್ರೀ ಎಸ್.ಕೆ.ಹುಕ್ಕೆರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಮೂಡಲಗಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ವಿದ್ಯಾರ್ಥಿನಿಯರ ಖೋಖೋ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ ಶ್ವೇತಾ ರಾಮಸಿದ್ದ ಮುರಕಿಬಾವಿ ಇವರು 400 ಮೀ, 800 ಮೀ, ಉದ್ದಜಿಗಿತ ಸ್ಪರ್ದೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮತ್ತು ಕುಮಾರ ರವಿ ಮುರಕಿಬಾವಿ ಇವರು 500ಮೀ, 800ಮೀ, 1500ಮೀ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಪಡೆದುಕೊಂಡಿದ್ದಾರೆ. ಹಾಗೂ ಕುಮಾರಿ ಪೂಜಾ ಪೂಜೇರಿ ಚದುರಂಗ ಸ್ಪರ್ಧೆ, ಕುಮಾರಿ ಮಡ್ಡೆವ್ವಾ ಐದುಡ್ಡಿ 100ಮೀ ಓಟದ ಸ್ಪರ್ಧೆ, ಕುಮಾರಿ ಗಾಯತ್ರೀ ಹೀರೆಮಠ ಯೋಗಾ ಸ್ಪರ್ಧೆ, ಮತ್ತು ಗುರುರಾಜ ಟಿ.ಕೆ. ಹಳ್ಳಿ ಯೋಗಾಸ್ಪರ್ಧೆ, ಈ ಎಲ್ಲಾ ಸ್ಪರ್ಧೆಗಳಲ್ಲಿ ಭಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ವಿದ್ಯಾರ್ಥಿ/ನಿಯರಿಗೆ ಮಹಾವಿದ್ಯಾಲಯದ ಅಧ್ಯಕ್ಷರು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Spread the love

About inmudalgi

Check Also

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Spread the loveರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ