ಡಾ.ಅಶೋಕ ದಳವಾಯಿಗೆ 4ನೇ ಪಿ.ಎಚ್.ಡಿ
ಮೂಡಲಗಿ: ಹಿರಿಯ ಆಯ್.ಎ.ಎಸ್ ಅಧಿಕಾರಿ ಕೃಷಿ ತಜ್ಞ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕೌಜಲಗಿಯ ಡಾ.ಅಶೋಕ ಎಂ.ದಳವಾಯಿಯವರು ಈಗ 4ನೇ ಬಾರಿ ಪಿ.ಎಚ್.ಡಿ ಪದವಿ ಪಡೆಯಲಿದ್ದಾರೆ.
ಓಡಿಸ್ಸಾ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದವರು ದಳವಾಯಿಯವರಿಗೆ ಗೌರವ “ಡಾಕ್ಟರ ಆಪ್ ಸೈನ್ಸ” ಪದವಿ ಪ್ರಧಾನ ಮಾಡುವದಾಗಿ ತಿಳಿಸಿದ್ದಾರೆ, ಡಿ.18 ರಂದು ವಿಶ್ವವಿದ್ಯಾಲಯದ ಡಾ.ಎಮ್.ಎಸ್.ಸ್ವಾಮಿನಾಥನ್ ಭವನದಲ್ಲಿ ಜರುಗಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಓರಿಸ್ಸಾ ರಾಜ್ಯಪಾಲರು ಪದವಿ ಪ್ರಧಾನ ಮಾಡುವರು, ದಳವಾಯಿಯವರು ಈ ಮುಂಚೆ ಆರ್ಥಶಾಸ್ತ್ರ ವಿಷಯದಲ್ಲಿ ಪ್ರಭಂದ ಮಂಡಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಗಳಿಸಿಕೊಂಡಿದ್ದರು, ನಂತರ ಅವರು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದ ಧಾರವಾಡ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯ ದವರು 2016ರಲ್ಲಿ ದಳವಾಯಿಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. ಇತ್ತೀಚಿಗೆ ಗದಗಿನ ಪಂಚಾಯತ್ ರಾಜ್ ಮತ್ತು ಗ್ರಾಮೀನಾಭಿವೃದ್ಧಿ ವಿಶ್ವವಿದ್ಯಾಲಯದವರು ಕೂಡಾ ದಳವಾಯಿಯವರಿಗೆ ಕೃಷಿ, ಆಡಳಿತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರ್ ಆಪ್ ಸೈನ್ಸ್ ಪದವಿಯನ್ನು ಪ್ರಧಾನ ಮಾಡಿದರು. ಈಗ ಅವರು ನಾಲ್ಕನೇ ಬಾರಿ ಪಿ.ಎಚ್.ಡಿ ಪದವಿ ಪಡೆಯುತ್ತಿರುವ ದೇಶದ ಏಕೈಕ ಆಯ್.ಎ.ಎಸ್ ಅಧಿಕಾರಿಯಾಗಿದ್ದಾರೆ.