‘ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಉತ್ಸಾಹ ವೃದ್ಧಿ’
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪೊಲೀಸ್ ವಸತಿ ಗೃಹದ ಹತ್ತಿರದ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಶಿಬಿರವನ್ನು ಉದ್ಘಾಟಿಸಿದ ಪಿಎಸ್‍ಐ ಎಚ್.ವೈ. ಬಾಲದಂಡಿ ಮಾತನಾಡಿ, ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಉತ್ಸಹ ಇರುತ್ತದೆ, ವೈದ್ಯರು ನೀಡುವ ಸಲಹೆ ಉಪಚಾರವನ್ನು ಸರಿಯಾಗಿ ಪಾಲಿಸುವ ಮೂಲಕ ರೋಗಗಳಿಂದ ಮುಕ್ತರಾಗಿರಿ ಎಂದರು.
ಮದುಮೆಹ ಕಾಯಿಲ್ಲೆಯನ್ನು ನಿರ್ಲಕ್ಷ ಮಾಡಬಾರದು, ಮಾನಸಿಕ ಒತ್ತಡ, ಆಹಾರದಲ್ಲಿ ವ್ಯತ್ಯಾಸ ಮಾಡಬಾರದು, ಉತ್ತಮ ಆಹಾರ, ವ್ಯಾಯಾಮ ಮೂಲಕ ಮಧುಮೇಹವನ್ನು ನಿರ್ಮೂಲನೆ ಮಾಡಬಹುದು ಎಂದ ಅವರು ಗಿರಡ್ಡಿ ಆಸ್ಪತ್ರೆಯವರು ಮತ್ತು ಲಯನ್ಸ್ ಕ್ಲಬ್‍ದವರು ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ಲಯನ್ಸ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿರಡ್ಡಿ ಆಸ್ಪತ್ರೆಯವರು ಪ್ರತಿವರ್ಷ ಉಚಿತ ಆರೋಗ್ಯ ಶಿಬಿರ ಏಪರ್ಡಿಸಿ ಬಡವರಿಗೆ ಸಹಾಯ ಮಾಡುತ್ತಿರುವುದು ಡಾ.ಗಿರಡ್ಡಿ ಕಾರ್ಯವನ್ನು ಶ್ಲಾಘಿಸಿದರು. ಲಯನ್ಸ ಕ್ಲಬವು ಕಳೆದ ಆರು ವರ್ಷಗಳಿಂದ ಹಲವಾರ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಸಲಿಸುತ್ತಿದೆ ಎಂದರು.
ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಪ್ರಶಾಂತ ಬಾಬನ್ನವರ ಮತ್ತು ಡಾ. ಬನಶಂಕರಿ ಗಿರಡ್ಡಿ ಅವರು ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ, ಆಯ್ದ ರಕ್ತ ತಪಾಸಣೆ, ಇಸಿಜಿ ಮತ್ತು ಇತರೆ ರೋಗಗಳ ಬಗ್ಗೆ ಸುಮಾರು 230ಕ್ಕೂ ಅಧಿಕ ಸಂಖ್ಯೆಯ ರೋಗಿಗಳನ್ನು ತಪಾಸಿದರು. ರೂ. 30 ಸಾವಿರ ಮೌಲ್ಯದಷ್ಟು ಉಚಿತ ವಿವಿಧ ಔಷಧ, ಮಾತ್ರೆ, ಮುಲಾಮು ವಿತರಿಸಿದರು.
ಸಮಾರಂಭದಲ್ಲಿ ಡಾ. ಪ್ರಕಾಶ ನಿಡಗುಂದಿ, ಡಾ.ರಾಜೇಂದ್ರ ಗಿರಡ್ಡಿ, ಡಾ.ಸಚಿನ್ ಟಿ, ಸುಪ್ರೀತ ಸೋನವಾಲ್ಕರ, ಮಲ್ಲಪ್ಪ ಖಾನಗೌಡರ, ಸಂಜಯ ಮೋಕಾಸಿ, ಶ್ರೀಶೈಲ್ ಲೋಕನ್ನವರ, ಡಾ. ಸಂಜಯ ಶಿಂಧಿಹಟ್ಟಿ, ಎನ್.ಟಿ. ಪೀರೋಜಿ, ಸಂಗಮೇಶ ಕೌಜಲಗಿ, ವೆಂಕಟೇಶ ಸೋನವಾಲ್ಕರ, ಪುಲಕೇಶ ಸೋನವಾಲ್ಕರ, ಎಸ್.ಕಿತ್ತೂರ, ಗಿರೀಶ ಆಸಂಗಿ ಮತ್ತಿತರು ಇದ್ದರು.