Breaking News
Home / Recent Posts / ಕವಟಗಿಮಠ ಪರ ಮತಯಾಚಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ

ಕವಟಗಿಮಠ ಪರ ಮತಯಾಚಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ

Spread the love

ಕವಟಗಿಮಠ ಪರ ಮತಯಾಚಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ

ನಿಪ್ಪಾಣಿ : ಕಾಂಗ್ರೇಸ್ ಪಕ್ಷ ದುಡ್ಡಿನ ಮೇಲೆ ನಿಂತಿದ್ದು, ದುಡ್ಡು ಇದ್ದವರಿಗೆ ಮಾತ್ರ ಆ ಪಕ್ಷದಲ್ಲಿ ಬೆಲೆ ಇದೆ. ಹಿಂದುಳಿದ ವರ್ಗಗಳ ನಾಯಕರಿಗಂತೂ ಬೆಲೆಯೇ ಇಲ್ಲ. ಹೀಗಾಗಿ ಆ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಬೇಕಾಯಿತು ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಿಪ್ಪಾಣಿ ಮತಕ್ಷೇತ್ರದ ಗ್ರಾಪಂ, ಪಪಂ ಹಾಗೂ ನಗರಸಭೆ ಸದಸ್ಯರಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸಮಗ್ರ ಪ್ರಗತಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಪರವಾಗಿ ಮತಯಾಚಿಸಲು ಇಲ್ಲಿಗೆ ಬಂದಿದ್ದೇನೆ. ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತ ಯಾರಿಗೆ ಚಲಾಯಿಸಬೇಕೆಂಬುದು ಇಷ್ಟರಲ್ಲಿಯೇ ವರಿಷ್ಟರು ಹೇಳಲಿದ್ದಾರೆ. ಅದರಲ್ಲೂ ಕವಟಗಿಮಠ ಅವರನ್ನು ಗೆಲ್ಲಿಸಬೇಕಿದೆ. ಅದರಂತೆ ಕಾಂಗ್ರೇಸ್ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಸೋಲಿಸಬೇಕಿದೆ ಎಂದು ಹೇಳಿದರು.
ಹಾಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅಥವಾ ಹಿರಿಯ ಮುಖಂಡ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೇಟ್ ಸಿಕ್ಕಿದ್ದಲ್ಲಿ ಈ ಚುನಾವಣೆಯಲ್ಲಿ ಲಖನ್ ಅವರು ಸ್ಪರ್ಧೆ ಮಾಡುತ್ತಿರಲಿಲ್ಲ. ಯಾವುದೇ ಆಮೀಷಗಳಿಗೆ ಒಳಗಾಗಬೇಡಿ. ಗುಂಡಾ ಪ್ರವೃತ್ತಿಯಿಂದ ಮೆರೆಯುತ್ತಿರುವ ಕೆಪಿಸಿಸಿ ಅಧ್ಯಕ್ಷರಿಗೆ ತಕ್ಕ ಪಾಠ ಕಲಿಸಲು ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್‍ನ್ನು ಧೂಳಿಪಟ ಮಾಡುವಂತೆ ರಮೇಶ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು.
ಅಭಿನಂದನ ಪಾಟೀಲ, ವಿಲಾಸ ಗಾಡಿವಡ್ಡರ, ಅಶೋಕಕುಮಾರ ಅಸೋಧೆ, ಜಯವಂತ ಕಾಂಬಳೆ, ಸಂಜಯ ಕಾಗೆ, ಅಮೀತ ಸಿಂಧೆ, ಉಮೇಶ ಪಾಟೀಲ, ಸೇರಿದಂತೆ ಇತರೇ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ

Spread the loveಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ