ಡಾ. ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆ
ಮೂಡಲಗಿ : ಡಾ. ಅಂಬೇಡ್ಕರ ಅವರ ಸಮಾನತೆಯ ಕನಸು ನನಸಾಗಬೇಕಾದರೆ ಮೌಡ್ಯ, ಕಂದಾಚಾರಗಳನ್ನು ಬಿಟ್ಟು ಅವರ ತತ್ವಾದರ್ಶಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಹಾಗೂ ಮಾಜಿ ಪುರಸಭೆ ಸದಸ್ಯ ರಮೇಶ ಸಣ್ಣಕ್ಕಿ ಹೇಳಿದರು.
ರಾಜೀವಗಾಂಧಿ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಘಟಕದಿಂದ ಹಮ್ಮಿಕೊಂಡ ಡಾ. ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿ ಹಿಡಿಯುವ ನಿಟ್ಟಿನಲಿ ಅಭೂತ ಪೂರ್ವ ಕೊಡೆಗೆ ನೀಡಿದ ಅಂಬೇಡ್ಕರ ಅವರ ತತ್ವಸಿದ್ಧಾಂತಗಳು ಆದರ್ಶವಾಗಿವೆ. ಅವರು ದೇಶದ ಬಗ್ಗೆ ಕಟ್ಟಿದ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಅವಿರತವಾಗಿ ಶ್ರಮಿಸಬೇಕಿದೆ ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬಾಳೇಶ ಬನ್ನಟ್ಟಿ ಮಾತನಾಡಿ, ಅಪಾರ ಮಾನವೀಯತೆ ಹೊಂದಿದ್ದ ಡಾ.ಅಂಬೇಡ್ಕರ ಅವರು ಶಿಕ್ಷಣದ ಪ್ರತಿಪಾದಕರಾಗಿದ್ದರು.ಆದ್ದರಿಂದ ಸಮಾಜ ಸುಧಾರಣೆಗೆ ಶಿಕ್ಷಣ ಅವಶ್ಯವಿದ್ದು ಅನಿಷ್ಠ ಪದ್ದತಿಗಳನ್ನು ಬಿಟ್ಟು ಡಾ.ಬಾಬಾಸಾಹೇಬ ಅಂಬೇಡ್ಕರರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಂದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ಶಾಬಪ್ಪ ಸಣ್ಣಕ್ಕಿ, ಪ್ರಭಾಕರ ಬಂಗೆನ್ನವರ, ವಿಲಾಸ ಸಣ್ಣಕ್ಕಿ, ರಮೇಶ ಬಿ ಸಣ್ಣಕ್ಕಿ, ಸುಂದರ ಬಾಲಪ್ಪನವರ, ಯಶವಂತ ಮರೆನ್ನವರ, ರಾಜು ಪರಸನ್ನವರ, ಚನ್ನಪ್ಪ ಢವಳೇಶ್ವರ, ಜಾರ್ಜ ಮೂಡಲಗಿ, ಮನೋಹರ ಸಣ್ಣಕ್ಕಿ, ಅಡಿವೆವ್ವ ಮರೆಪ್ಪಗೋಳ, ಸತ್ಯವ್ವ ಕಳ್ಳಿಮನಿ, ಯಲ್ಲವ್ವ ನಾಗನ್ನವರ, ಸುವರ್ಣ ಸಣ್ಣಕ್ಕಿ, ಕೆಂಪವ್ವ ಮೆಳ್ಳಿಗೇರಿ, ಚಂದ್ರವ್ವ ನಾಗನ್ನವರ, ಇಂದ್ರವ್ವ ಢವಳೇಶ್ವರ ಮತ್ತಿತರರು ಇದ್ದರು.