Breaking News
Home / Recent Posts / ಮೂಡಲಗಿ-ಗುರ್ಲಾಪುರ ಕ್ರಾಸ್ ರಸ್ತೆ ಅಗಲೀಕರಣ ಅತೀಕ್ರಮ ತೆರವು ಕಾರ್ಯಾಚರಣ

ಮೂಡಲಗಿ-ಗುರ್ಲಾಪುರ ಕ್ರಾಸ್ ರಸ್ತೆ ಅಗಲೀಕರಣ ಅತೀಕ್ರಮ ತೆರವು ಕಾರ್ಯಾಚರಣ

Spread the love

ಮೂಡಲಗಿ-ಗುರ್ಲಾಪುರ ಕ್ರಾಸ್ ರಸ್ತೆ ಅಗಲೀಕರಣ
ಅತೀಕ್ರಮ ತೆರವು ಕಾರ್ಯಾಚರಣ
ಮೂಡಲಗಿ: ಮೂಡಲಗಿಯಿಂದ ಗುರ್ಲಾಪುರ ಕ್ರಾಸ್‍ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭ ಪೂರ್ವದಲ್ಲಿ ರಸ್ತೆ ಅತೀಕ್ರಮವಾಗಿದ್ದ ಶೆಡ್ ಮತ್ತು ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚಾರಣೆಯನ್ನು ಮುಖ್ಯಾಧಿಕಾರಿ ದೀಪಕ ಹರ್ದಿ ಅವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನಡೆಸಿದರು. ಅವರೊಂದಿಗೆ ಪುರಸಭೆಯ ಆಡಳಿತ ಮಂಡಳಿಯವರು ಕೈ ಜೋಡಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ದೀಪಕ ಹರ್ದಿ ಮಾಧ್ಯಮದೊಂದಿಗೆ ಮಾತನಾಡಿ ‘ಮೂಡಲಗಿ ಪಟ್ಟಣದ ಅಭಿವೃದ್ಧಿಗಾಗಿ ಶಾಸಕ ಬಾಲಚಂದ್ರ ಜಾರಕಿಕೊಳಿ ಅವರು ಬಿಡುಗಡೆ ಮಾಡಿರುವ ರೂ. 2 ಕೋಟಿ ವಿಶೇಷ ಅನುದಾನದಲ್ಲಿ ರೂ. 45 ಲಕ್ಷ ಅನುದಾನವನ್ನು ಮೂಡಲಗಿ-ಗುರ್ಲಾಪುರ ಕ್ರಾಸ್‍ವರೆಗಿನ ಮುಖ್ಯ ರಸ್ತೆಯ ಅಗಲೀಕರಣಕ್ಕಾಗಿ ಇಡಿಸಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿಯು ತ್ವರಿತಗತಿಯಲ್ಲಿ ಮುಗಿಸುವುದಾಗಿ’ ತಿಳಿಸಿದರು.
ಮೂಡಲಗಿಯಿಂದ ಗುರ್ಲಾಪುರ ಕ್ರಾಸ್‍ವರೆಗೆ 20 ಮೀಟರ್ ಅಗಲದ ರಸ್ತೆ ಮಾಡಲಾಗುತ್ತಿದೆ. ರಸ್ತೆ ಮೇಲೆ ಅತೀಕ್ರಮವಾಗಿದ್ದ ಸಣ್ಣಪುಟ್ಟ ಶೆಡ್‍ಗಳನ್ನು ಗುರುವಾರ ಬೆಳಿಗ್ಗೆ ತೆರವುಗೊಳಿಸಿದ್ದು, ಅವುಗಳ ಮಾಲೀಕರು ಸಹ ಪಟ್ಟಣದ ಅಭಿವೃದ್ಧಿಗಾಗಿ ಸಹಕಾರ ನೀಡಿದ್ದಾರೆ ಎಂದರು.
ಮೂಡಲಗಿಯಿಂದ ಗುರ್ಲಾಪುರ ಕ್ರಾಸ್‍ವರೆಗೆ ರಸ್ತೆಯ ಅಗಲೀಕರಣವಾಗಲಿದ್ದು ಒಟ್ಟು 20 ಮೀಟರ್ ಅಗಲದ ರಸ್ತೆಯ ಮೇಲೆ ಅತೀಕ್ರಮವಾಗಿರುವ ನಿವೇಶನ ಮತ್ತು ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಹರ್ದಿ ಅವರು ತಿಳಿಸಿದರು.
ಮೂಡಲಗಿ ಗುರ್ಲಾಪುರ ಕ್ರಾಸ್‍ವರೆಗೆ ಇದು ಮುಖ್ಯರಸ್ತೆಯಾಗಿದ್ದರಿಂದ ಈಗಿರುವ ಕಡಿಮೆ ಅಗಲದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆಯಾಗುತಿತ್ತು. ಇದನೆಲ್ಲ ಗಮನಿಸಿ ಶಾಸಕರು ಸಂಚಾರ ಸುಗಮವಾಗುವ ಸಲುವಾಗಿ ಮೂಡಲಗಿ ಗುರ್ಲಾಪುರ ರಸ್ತೆ ಅಗಲೀಕರಣಕ್ಕೆ ಆದ್ಯತೆ ನೀಡಿದ್ದಾರೆ ಎಂದು ಹರ್ದಿ ಅವರು ತಿಳಿಸಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯರಾದ ಶಿವು ಚಂಡಕಿ, ಸಿದ್ದು ಗಡ್ಡೇಕಾರ, ಗಫಾರ ಡಾಂಗೆ, ಈರಣ್ಣ ಕೊಣ್ಣೂರ, ಆನಂದ ಟಪಾಲದಾರ, ಅನ್ವರ ನಧಾಪ, ಚನ್ನಪ್ಪ ಅಥಣಿ, ಹುಸೇನಸಾಬ ಶೇಖ, ನನ್ನುಸಾಬ ಶೇಖ, ಮುಖಂಡರಾದ ಸಿದ್ದಪ್ಪ ಮಗುದುಮ್, ಮರೆಪ್ಪ ಮರೆಪ್ಪಗೋಳ, ಪುರಸಭೆ ಎಂಜಿನಿಯರ್ ತಿರುಪತಿ, ಪಿಎಸ್‍ಐ ಕಿರಣ ಮೋಹಿತೆ, ಆರೋಗ್ಯ ನೀರೀಕ್ಷಕ ಚಿದಾನಂದ ಮುಗಳಖೋಡ, ಇದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ