ಮೂಡಲಗಿ: ಮೂಡಲಗಿಯಿಂದ ಮಹಾಲಿಂಗಪೂರ ವಾಯ ಹಳ್ಳೂರ ಶಿವಾಪುರ ಕಪ್ಪಲಗುದ್ದಿ ಕ್ರಾಸ್ ಸೈದಾಪುರ ಹಳ್ಳೂರ ಕ್ರಾಸ್ ಹೀಗೆ ದಿನನಿತ್ಯ ಬಸ್ ಸಂಚರಿಸಲು ಅರಭಾವಿ ಶಾಸಕರು ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಾಗ ತಕ್ಷಣ ಸ್ಪಂದಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರಂತರ ಬಸ್ ಸಂಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಅವರು ಚಿಕ್ಕೋಡಿ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕೆಂದು ಹೇಳಿದರು. ತಕ್ಷಣ ಮೂಡಲಗಿ ಗೆ ಆಗಮಿಸಿದ ಚಿಕ್ಕೋಡಿ ಅಸಿಸ್ಟೆಂಟ್ ಟ್ರಾಫಿಕ್ ಆಫೀಸರ್ ಅಪ್ಪಣ್ಣ ಚಬ್ಬಿ ಹಾಗೂ ಶಾಂತಿನಾಥ್ ಕೊರಬು ಅವರು ನಿರಂತರ ಬಸ್ ಸಂಚರಿಸಲು ತಾಲೂಕ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು. ಕರ್ನಾಟಕ ರಾಜ್ಯ ಯುವ ಸಂಘ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಸಿದ್ದಣ್ಣ ದುರದುಂಡಿ ಅವರು ನಮ್ಮ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡಾಗ ತಕ್ಷಣ ಸ್ಪಂದಿಸಿದ ನಿರಂತರ ಬಸ್ ಸಂಚರಿಸಲು ಅಧಿಕಾರಿಗಳಿಗೆ ತಿಳಿಸಿದ ಕಾರ್ಯ ನಿಜವಾಗ್ಲೂ ಶ್ಲಾಘನೀಯವಾಗಿದೆ ಅವರಿಗೆ ಯಾವತ್ತೂ ಚಿರಋಣಿ ಆಗಿರುತ್ತೇವೆ ಎಂದು ಹೇಳಿದರು.
ರಾಯಬಾಗ ಘಟಕದಿಂದ ಬಂದಂತ ಹೊಸ ಬಸ್ಸನ್ನು ಕಂಡಕ್ಟರ್ ಕಾವೇರಿ ಬಾಸಗಿ ಪೂಜೆ ಮಾಡಿ ಬಸ್ ನಿರಂತರ ಸಂಚರಿಸಲು ಯಾವುದೇ ತೊಂದರೆಯಾಗದಂತೆ ದೇವರಲ್ಲಿ ಪ್ರಾರ್ಥಿಸಿದರು. ಮೂಡಲಗಿ ಸಾರಿಗೆ ನಿಯಂತ್ರಕರಾದ ಬಾಳಪ್ಪ ದಂಡಾಪುರ ಮಾದೇವ ಕಂಬಿ ಮೂಡಲಗಿ ಬಸ್ಸ್ಟ್ಯಾಂಡ್ ಸಾಯಕ ಸಿಬ್ಬಂದಿಗಳಾದ ಶ್ರೀಶೈಲ್ ದೆಸಾರಟಿ ಹನುಮಂತ ಬಜಂತ್ರಿ ರವೀಂದ್ರ ಕೊರಣೆ ಬಸ್ ಸ್ಟ್ಯಾಂಡರ್ಡ್ ಸ್ವಚ್ಛತಾ ಸೇವಕ ಸೈಪನಸಾಬ್ ಮಂಟೂರ್ ಚುಟುಕುಸಾಬ್ ಮಂಟೂರ್ ಹಾಗೂ ಪವನ್ ಅಂಗಡಿ ಗೂಳಪ್ಪ ಅರಳಿಮಟ್ಟಿ ದ್ರಾಕ್ಷಾಯಿಣಿ ಕಿಳ್ಳಿಕೇತರು ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಧನ್ಯವಾದಗಳು ಸಲ್ಲಿಸಿದರು. ಸಿಬ್ಬಂದಿ ವರ್ಗ ಪ್ರಯಾಣಿಕರು ಗ್ರಾಮೀಣ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.