ಬೆಳದಿಂಗಳ ‘ಸಾಹಿತ್ಯ ಚಿಂತನ-ಮಂಥನ’ ಉದ್ಘಾಟನೆ
ಮೂಡಲಗಿ: ಇಲ್ಲಿಯ ಜ್ಞಾನದೀಪ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಆಯೋಜಿಸಲಿರುವ ‘ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮದ ಉದ್ಘಾಟನೆಯು ಡಿ. 19ರಂದು ಸಂಜೆ 5ಕ್ಕೆ ಹರ್ಷ ದಂತ ಚಿಕಿತ್ಸಾ ಆಸ್ಪತ್ರೆಯ ಸಂಸ್ಕøತಿ ಭವನದಲ್ಲಿ ಜರುಗಲಿದೆ.
ಮೂಡಲಗಿಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಗೋಕಾಕದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ, ಚಿಂತಕ ಪ್ರೊ. ಚಂದ್ರಶೇಖರ ಅಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅದ್ಯಕ್ಷ ಮೋಹನ ಪಾಟೀಲ ಹಾಗೂ ಬೆಳಗಾವಿಯ ವಿಭಾಗೀಯ ಕಾರ್ಮಿಕ ಇಲಾಖೆ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಭಾಗವಹಿಸುವರು. ಸೋಮಶೇಖರ ಕಂಠೀಕಾರಮಠ ಹಾಗೂ ಬಸವರಾಜ ಕರಕಂಬಿ ಅವರಿಂದ ಸಂಗೀತ ಇರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ತಿಳಿಸಿದ್ದಾರೆ.