Breaking News
Home / Recent Posts / ಲಯನ್ಸ್ ಪರಿವಾರದಿಂದ ಇಂದು ಅನ್ನದಾಸೋಹ

ಲಯನ್ಸ್ ಪರಿವಾರದಿಂದ ಇಂದು ಅನ್ನದಾಸೋಹ

Spread the love

 

ಲಯನ್ಸ್ ಪರಿವಾರದಿಂದ ಇಂದು ಅನ್ನದಾಸೋಹ

ಮೂಡಲಗಿ: ಲಯನ್ನ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಮತ್ತು ಅವರ ಪಾಲಕರಿಗೆ ಇಂದು ಸೋಮವಾರ ದಿನಾಂಕ: 20-12-2021ರಂದು ಮಧ್ಯಾಹ್ನ 12 ಗಂಟೆಗೆ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ.
ಮೂಡಲಗಿಯ ಎಲವು ಕೀಲು ಚಿಕಿತ್ಸಾ ತಜ್ಞ ಡಾ. ರಾಜೇಂದ್ರ ಅ. ಗಿರಡ್ಡಿ ಅವರು ಅನ್ನದಾಸೋಹಿಗಳಾಗಿರುವರು. ಮುಖ್ಯ ಅತಿಥಿ ಮೂಡಲಗಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ನಿರ್ದೇಶಕ ಶ್ರೀ ಅಜ್ಜಪ್ಪ ಗಿರಡ್ಡಿ, ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಭಾಗವಹಿಸುವರು. ಲಯನ್ಸ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆವಹಿಸುವರು ಎಂದು ಲಯನ್ಸ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಮತ್ತು ಖಜಾಂಚಿ ಸುಪ್ರೀತ ಸೋನವಾಲಕರ ತಿಳಿಸಿದ್ದಾರೆ.
ಅನ್ನದಾಸೋಹಿಯಾಗಲು ಭಿನ್ನಹ: ಲಯನ್ಸ್ ಕ್ಲಬ್‍ದಿಂದ ಪ್ರತಿ ತಿಂಗಳದಲ್ಲಿ ಎರಡು ಬಾರಿ ಸೋಮವಾರದಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗುತ್ತಿದೆ. ಅನ್ನದಾಸೋಹದ ಪ್ರಾಯೋಜಕತ್ವವನ್ನು ಸಾರ್ವಜನಿಕರು ವಹಿಸಿಕೊಳ್ಳಲು ಅವಕಾಶವಿದೆ. ತಮ್ಮ ಕುಟುಂಬದ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ, ಪುಣ್ಯಸ್ಮರಣೆ ಅಂಗವಾಗಿ ಅನ್ನದಾಸೋಹ ಮಾಡುವ ಅವಾಕಾಶವಿದೆ. ಸರ್ಕಾರಿ ಆಸ್ಪತ್ರೆಯ ಒಳ ಮತ್ತು ಹೊರರೋಗಿಗಳು ು 350ರಿಂz 400 ಜನರು ಮತ್ತು ಅವರೊಂದಿಗೆ ಇರುವ ಸಂಬಂಧಿಕರು ಅನ್ನದಾಸೋಹದ ಪ್ರಯೋಜನ ಪಡೆದುಕೊಳ್ಳುವರು. ‘ಅನ್ನದಾನಕ್ಕಿಂತ ಮುನ್ನ ದಾನ ಇಲ್ಲ’ ಶರಣರ ವಾಣಿಯಂತೆ ಅನ್ನದಾಸೋಹದ ವಿನಮ್ರ ಸೇವೆಗೆ ಅವಕಾಶ ಇದೆ. ಲಯನ್ಸ್ ಕ್ಲಬ್‍ದ ಪೂರ್ಣ ಸಹಕಾರ ತಮ್ಮೊಂದಿಗೆ ಇರುತ್ತದೆ. ಆಸಕ್ತರು ಮೊ. 9448839086 ಸಂಪರ್ಕಿಸಲು ಲಯನ್ಸ್ ಕ್ಲಬ್‍ದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ