ತುಕ್ಕಾನಟ್ಟಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ
ಮೂಡಲಗಿ: ಕರೋನಾ ವೈರಸ ಮತ್ತೆ ರಾಜ್ಯದಲ್ಲಿ ವ್ಯಾಪಕವಾಘಿ ಹರಡುತ್ತಿರುವದರಿಂದ 15 ರಿಂದ 18 ರ ವಯೋಮಾನದ ಎಲ್ಲ ವಿದ್ಯಾರ್ಥಿಗಳು ಲಸಿಕೆಯನ್ನು ಪಡೆಯುವದು ತುಂಬಾ ತುಕ್ಕಾನಟ್ಟಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ ಅವಶ್ಯಕ ಹಾಗೂ ಕಡ್ಡಾಯವಾಗಿದೆ ಎಂದು ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಹುಲ ಬೆಳವಿ ಹೇಳಿದರು.
ಅವರು ತುಕ್ಕಾನಟ್ಟಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿ ಮಾತನಾಡಿದರು.
ಈ ಸಮಯದಲ್ಲಿ ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಕೆ.ಉಪ್ಪಾರ ಮಾತನಾಡಿ, ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವದರೊಂದಿಗೆ ಲಸಿಕೆ ಪಡೆದು ಕರೋನಾ ಮುಕ್ತರಾಗಲುಕರೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಮಾತನಾಡಿ ಸರ್ಕಾರದ ನಿಯಮಾವಳಿ ಪ್ರಕಾರ ನಮ್ಮ ಶಾಲೆ ಲಸಿಕೆ ಪಡೆಯವ ಅಹರ್ತೆ ಹೊಂದಿದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದರು.
ಈ ಸಮಯದಲ್ಲಿ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಇದ್ದರು.