Breaking News
Home / Recent Posts /   ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರ ‘ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತ

  ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರ ‘ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತ

Spread the love

ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರ ‘ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತ

ಮೂಡಲಗಿ: ಜಮಖಂಡಿಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಕ್ಲಬ್ ಪ್ರಾಂತೀಯ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸದಸ್ಯ ಅಪ್ಪಣ್ಣ ಬಡಿಗೇರ ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೇಸ್‍ಬಾಲ್‍ನ ಲೀಗ್‍ದಲ್ಲಿ ನಡೆದ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅಪ್ಪಣ್ಣ ಬಡಿಗೇರ ಔಟಾಗದೆ 96 ರನ್‍ಗಳು ಮತ್ತು ಎಡನೇ ಸುತ್ತಿನ ಪಂದ್ಯದಲ್ಲಿ ಔಟಾಗದೆ 56 ರನ್‍ಗಳನ್ನು ತೆಗೆದು ತಂಡಕ್ಕೆ ಗೆಲವು ತಂದುಕೊಟ್ಟಿರುವರು. ಇದೇ ಪಂದ್ಯದಲ್ಲಿ ತಂಡದ ನಾಯಕ ಶಿವಾನಂದ ಗಾಡವಿ ಔಟಾಗದೆ 58 ರನ್‍ಗಳನ್ನು ತೆಗೆದುಕೊಳ್ಳುವುದರ ಮೂಲಕ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವರು.
ಇತ್ತಿಚೆಗೆ ಮೂಡಲಗಿಯಲ್ಲಿ ನಡೆದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಭೇಟ್ಟಿ ಸಂದರ್ಭದಲ್ಲಿ ಅಪ್ಪಣ್ಣ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಕೃಷ್ಣಾಜೀ ಬಗಲಿ, ಉಜ್ವಲಾ ಮೋರೆ, ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಖಜಾಂಚಿ ಸುಪ್ರೀತ್ ಸೋನವಾಲಕರ, ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಮಹಾಂತೇಶ ಹೊಸೂರ, ಸಂಜಯ ಮೋಕಾಸಿ, ಶಿವಾನಂದ ಕಿತ್ತೂರ ಮತ್ತಿತರರು ಇದ್ದರು.


Spread the love

About inmudalgi

Check Also

ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಬಸವಣ್ಣನವರು ಶತ ಶತಮಾನದ ಹಿಂದೆ ಕಲ್ಯಾಣದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ಆಸ್ಥಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ