ಮೂಡಲಗಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬಾಲಶೇಖರ ಬಂದಿ ಹೇಳಿದರು.
ಮೂಡಲಗಿ ಸಮೀಪದ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಸಭಾ ಮಂಟಪದಲ್ಲಿ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ವಡೇರಟ್ಟಿ ಎನ್ ಎಸ್ ಎಸ್ ಘಟಕ ಹಾಗೂ ಚೇತನ ಯುವಕ ಹಾಗೂ ಕ್ರೀಡಾ ಸಂಘ ಹೊಸಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ತಾಲೂಕಾ ಮಟ್ಟದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಬಹುಮಾನ ವಿತರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಸ್ವಾಮಿ ವಿವೇಕಾನಂದರು ನಕ್ಷತ್ರಗಳಲ್ಲಿ ಸೂರ್ಯನಿದ್ದಂತೆ ಇಂತಹ ಮಹಾನ ಸನ್ಯಾಸಿಗಳ ಸ್ಮರಣೆ ದಿನ ನಿತ್ಯ ನಡೆಯಬೇಕು ನಮ್ಮ ಉತ್ಸಾಹಿ ಯುವಕ ಸಿದ್ದಣ್ಣ ದುರದುಂಡಿ ಅವರ ಕಾರ್ಯ ಶ್ಲಾಘನೀಯವಾಗಿದೆ ಅವರಿಗೆ ನಾವು ನೀವೆಲ್ಲರೂ ಪ್ರೋತ್ಸಾಹ ನೀಡೋಣ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಿದ್ದಣ್ಣ ದುರದುಂಡಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಆಶೀರ್ವಾದ ಮಾಡಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಯುವಕರಲ್ಲಿ ಹುಮ್ಮಸ್ಸು ತೇಜಸ್ಸು ಭಾವಕ್ಯತೆ ಜಾತ್ಯಾತೀತತೆ ಭಾವನೆಯನ್ನು ಹೊಂದಿ ಸಧೃಡ ರಾಷ್ಟವನ್ನು ಕಟ್ಟಬೇಕು. ಸ್ವಾಮಿ ವಿವೇಕಾನಂದರ ತತ್ವಗಳ ಬಗ್ಗೆ ತಿಳಿಸುತ್ತಾ ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎಂದು ಯುವಕರಿಗೆ ಕರೆ ನೀಡಿದರು. ಎಸ್ ಆರ್ ಸಂತಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸುಭಾಷ ಪತ್ತಾರ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ದಾರಿದೀಪವಾಗಿದ್ದರು. ಯುವಕರು ದುಶ್ಚಟಗಳಿಗೆ ಮಾರು ಹೊಗದೇ ತಮ್ಮ ಯವ್ವನದ ಜೀವನವನ್ನು ಸುಂದರವಾಗಿ ಕಳೆಯಬೇಕು ಎಂದರು.
ಸಮಾರಂಭದ ಅದ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಎಂ ಜಿ ದೇವಡಿ ವಹಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್ ಡಿ ವಾಲಿ ಕೆ ಬಿ ಬೆಳಗಲಿ ಪರಸಪ್ಪ ಕುರಿ ವಿಠ್ಠಲ ಕುಂಬಾರ ಆನಂದ ಸುಳ್ಳನವರ ಜಗದೀಶ ಡೋಳ್ಳಿ, ಎನ್ ಎಂ ನಗಾರಿ, ಹಾಗೂ ಯುವ ಸಂಘಟನೆಗಳ ಪದಾದಿಕಾರಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಯುವಕರಿಗೆ ಪ್ರಶಸ್ತಿ ಪತ್ರ ಹಾಗೂ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಬಹುಮಾನ ನೀಡಲಾಯಿತು. ಉಪನ್ಯಾಸಕ ವಿಠ್ಠಲ ಜೋಡಟ್ಟಿ ಸ್ವಾಗತಿಸಿದರು ವಂದಿಸಿದರು.