ಮೂಡಲಗಿ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು ಮೂಡಲಗಿ ಪೋಲೀಸ್ ಠಾಣೆಯ ಪಿಎಸ್‍ಐ ರಾಜು ಪೂಜಾರಿ ಹೇಳಿದರು.
ಅವರು ಪಟ್ಟಣದ ಕೆ.ಹೆಚ್.ಸೋನವಾಲಕರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರದಂದು ಜರುಗಿದ ಮಾದಕ ವಸ್ತು ನಿರ್ಮೂಲನೆ ದಿನಾಚರಣೆಯಲ್ಲಿ ಮಾತನಾಡಿ, ಮಾದಕ ಪದಾರ್ಥಗಳನ್ನು ಬಳಸುವುದು, ಮಾರಾಟ ಮಾಡುವುದು ಮತ್ತು ಬಳಸುವವರ ಸಹವಾಸ ಮಾಡುವುದು ಅಪರಾಧ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಯ ಮತ್ತು ಶಿಕ್ಷಕರ ಗೌರವ ಹೆಚ್ಚಿಸಬೇಕು ಮತ್ತು ತಂದೆ-ತಾಯಿಗಳಿಗೆ ಗೌರವ ನೀಡುವ ಮುಖಾಂತಾರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದುರು.
ಕಾರ್ಯಕ್ರಮದಲ್ಲಿ ಪೆÇಲೀಸ್ ಠಾಣೆಯ ಲಕ್ಷ್ಮಣ ಗೋಡೆರ, ಶಾಲೆಯ ಮುಖ್ಯೋಪಾಧ್ಯಾಯ ಮಹೇಂದ್ರ ವಾಟಕರ, ಶಿಕ್ಷಕ ಕರಿಬಸವರಾಜ, ಪಿ,ಜಿ.ಪಾಟೀಲ, ಎಸ್.ಎಮ್.ಶೆಟ್ಟರ, ಎ.ಆರ್.ಕುರಬರ, ಶೇಖರ ಕುದರಿ, ಬಿ.ಐ.ಬಡಿಗೇರ, ಸದಾಶಿವ ಮಾದರ, ಮತ್ತು ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.