ಬೆಂಗಳೂರು: ನಿನ್ನೆ ತಾನೆ ಲಾಕ್ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಕ್ಯಾಬಿನೇಟ್ ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಸಿಎಂ ತೆಗೆದುಕೊಂಡು ನಿರ್ಧಾರಗಳು ಹೀಗಿವೆ:
ಕಂಟೈನ್ಮೆಂಟ್ ಝೋನ್ನಲ್ಲಿ ಬಿಗಿ ಭದ್ರತೆ. ಕಾನೂನು ಮೀರಿದರೆ ಕ್ರಿಮಿನಲ್ ಮೊಕದ್ದಮೆ
ಜನರ ಓಡಾಟಕ್ಕಾಗಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲ ಬಸ್ಗಳ ಓಡಾಟಕ್ಕೆ ಅನುಮತಿ
ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ. ಮಾಸ್ಕ್ ಕಡ್ಡಾಯ.
ಮಾಸ್ಕ್ ಹಾಕದೇ ಇದ್ದರೆ ದಂಡ ವಿಧಿಸಲು ನಿರ್ಧಾರ
ಹೊರ ರಾಜ್ಯದಿಂದ ಬರೋರಿಗೆ ಕ್ವಾರಂಟೈನ್ ಮಾಡುವ ತೀರ್ಮಾನ ಮುಂದುವರಿಕೆ
ಬೇರೆ ರಾಜ್ಯದಿಂದ ಅನಾವಶ್ಯಕವಾಗಿ ಬರಲು ಅವಕಾಶವಿಲ್ಲ
ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮನಿ, ಅವರಿಗೂ ಮಾಸ್ಕ್ ಕಡ್ಡಾಯ
ನಾಳೆಯಿಂದ ಮಾಲ್, ಸಿನಿಮಾ ಥಿಯೇಟರ್, ಹೋಟೆಲ್ ಬಿಟ್ಟು ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ
ನಮ್ಮ ರಾಜ್ಯದಲ್ಲಿ ಓಡಾಡಲು ಟ್ರೇನ್ಗಳಿಗೆ ಅವಕಾಶ
ಹೊರಗಡೆಯಿಂದ ಬರುವ ಟ್ರೇನ್ಗಳಿಗೆ ಅವಕಾಶ ನೀಡಲ್ಲ
ಸಲೂನ್ ಶಾಪ್ ತೆರೆಯಲು ಅನುಮತಿ
ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ಡೌನ್ ಇರುತ್ತೆ, ಜನರ ಓಡಾಟಕ್ಕೂ ಅವಕಾಶ ಇರಲ್ಲ
ಪಾರ್ಕ್ಗಳಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಾಯಂಕಾರ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್ಗಳಲ್ಲಿ ಓಡಾಟ ಮಾಡಲು ಅವಕಾಶ
IN MUDALGI Latest Kannada News