ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳು ಪ್ರಾರಂಭ-ಸುಣಗಾರ ಕರೆ
ಅಂಗನವಾಡಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ
ಮೂಡಲಗಿ:ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿದ್ದು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಪ್ರೇರಿಪಿಸಬೇಕೆಂದು ಮೇಲ್ವಿಚಾರಕಿ ಚಂಪಾ ಸುಣಗಾರ ಕರೆ ನೀಡಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ 421 ರ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡಿಯುವಂತೆ ಅಂಗನವಾಡಿಗಳು ಕಂಗೋಳಿಸುತ್ತಿವೆ ಎಂದರು.
ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಅವರು ಸರ್ವತೊಮುಖವಾಗಿ ಅಭಿವೃದ್ದಿಗೊಳಿಸುವ ಮತ್ತು ಅವರಿಗೆ ಶಿಕ್ಷಣದ ಮೂಲಕ ತರಬೇತಿ ನೀಡುವ ಮೂಲಕ ತಿಳುವಳಿಕೆಯನ್ನು ನೀಡಿ ಅವರ ಜೀವನದ ಮಟ್ಟವನ್ನು ಉತ್ತಗೊಳಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದರು.
ಮಕ್ಕಳ ಕೈಯಲ್ಲಿ ಗುಲಾಬಿ ಹೂ ಕೊಟ್ಟು ರಂಗೊಲಿ ಬಿಡಿಸಿ ಆರತಿ ಬೆಳಗಿ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ಜರುಗಿತು.ಅಲ್ಲದೇ ತೆಂಗಿನ ಗರಿ, ಮಾವಿನ ತೊರಣ ಕಟ್ಟಿ ಮಕ್ಕಳಿಗೆ ಹಬ್ಬದ ವಾತಾವರ್ಣ ಇರುವಂತೆ ಮಾಡಿ ಸಿಹಿ ಹಂಚಿದ ಅಂಗನವಾಡಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಎಂದರು.
ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಸೊಮನಟ್ಟಿ,ಸಹಾಯಕಿ ಹಣಮವ್ವ ಗುಡದನ್ನವರ ಇದ್ದರು.