ಮೂಡಲಗಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಹಿಳೆ ಲಕ್ಷ್ಮೀ ವಿಠ್ಠಲ ಕಳ್ಳಿಮನಿ ಇವರು ವಲಸೆ ಕುರಿಗಾರರ ಕುಂಟುಂಬವಾಗಿದೆ. ಫೇ. ೧೮ ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಕುರಿಹಟ್ಟಿಯಿಂದ ಕಟ್ಟಿಗೆ ತರಲು ಹೋದಾಗ ಮಹಮ್ಮದ ಕೋಲಕಾರ ಅಲಿಯಾಸ ಮುಕಬಲ್ ಎಂಬ ವ್ಯಕ್ತಿ ಅತ್ಯಾಚಾರ ವೆಸಗಿ ಕೋಲೆ ಮಾಡಿರುತ್ತಾರೆ.. ಈಗಾಗಲೇ ಆರೋಪಿಯನ್ನು ಬಂದಿಸಲಾಗಿದ್ದು, ಈ ಕೃತ್ಯೆದಲ್ಲಿ ಇನ್ನೂ ಹಲವಾರು ಜನ ಪಾಲ್ಗೋಂಡಿದ್ದಾರೆ ಎಂದು ಮೃತ ಲಕ್ಷ್ಮೀ ಕುಂಟುಂಬಸ್ಥರು ಅನುಮಾನ ವ್ಯಕ್ತ ಪಟ್ಟಿರುತ್ತಾರೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆಯನ್ನು ನಡೆಸುವಂತೆ ಸರ್ಕಾರಕ್ಕೆ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷರಾದ ವಿನಾಯಕ ಕಟ್ಟಿಕಾರ ಮಾತನಾಡಿ, ಮೃತ ಲಕ್ಷ್ಮಿ ಇವರಿಗೆ ಮೂರು ಚಿಕ್ಕ ಮಕ್ಕಳಿದ್ದು , ಇವರ ಕುಂಟುಂಬ ಸಂಪೂರ್ಣ ಕುರಿ ಸಾಕಾಣಿಕೆಯ ಮೇಲೆ ಅವಲಂಬಣೆಯಾಗಿದ್ದು, ರಾಜ್ಯ ಸರ್ಕಾರ ಕುಂಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದೆ. ಹಾಲುಮತ ಮಹಾಸಭಾದಿಂದ ಸರ್ಕಾರಕ್ಕೆ ಅಬಿನಂದನೆ ಮತ್ತು ರಾಜ್ಯದ ಎಲ್ಲಾ ಸಂಚಾರಿ ಕುರಿಗಾರರಿಗೆ ಅರಣ್ಯದಲ್ಲಿ ಅಧಿಕಾರಿಗಳಿಂದ ತೊಂದರೆ, ಕಳ್ಳತನ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.. ಸರ್ಕಾರ ಅವರಿಗೆ ಸುಕ್ತವಾದ ಭದ್ರತೆಯನ್ನು ನೀಡಬೇಕು. ಆರೋಪಿಗೆ ಕಠಿಣವಾದ ಶಿಕ್ಷೆ ಆಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಆ ಸಂದರ್ಭದಲ್ಲಿ ಕಲ್ಲೋಳಿ ಪಟ್ಟಣ ಪಂಚಾಯತ ಸದ್ಯಸರಾದ ಲಕ್ಷ್ಮಣ ಮರ್ಡಿ ,ಸಂಘಟನೆಯ ವೀರು ಮೋಡಿ, ಪ್ರಕಾಶ ಪಾಟೀಲ,ಸಿದ್ದು ದೇವರಮನಿ, ರಾಮೋಜಿ ಮಾಳಗಿ ಅನೇಕರು ಉಪಸ್ಥಿತರಿದ್ದರು.
Home / Recent Posts / ಅತ್ಯಾಚಾರ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಒತ್ತಾಯಿ
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …