ಮೂಡಲಗಿ, ಅಖಿಲ ಕರ್ನಾಟಕ ಲಿಂಗಾಯತ ಕಂಬಾರ,ಬಡಿಗೇರ ಕ್ಷೇಮಾಭಿವೃದ್ದಿ ಸಂಘ ತಾಲೂಕಾ ಘಟಕದ ವತಿಯಿಂದ ಸರಕಾರದ ವಿಷೇಷ ಪ್ಯಾಕೇಜಗಾಗಿ ಸೋಮವಾರ ತಹಶೀಲ್ದಾರ್ ಡಿ.ಜಿ. ಮಹಾತ್ ಅವರಿಗೆ ಮನವಿ ಅರ್ಪಿಸಿದರು.
ಲಿಂಗಾಯತ ಕಂಬಾರ,ಬಡಿಗೇರ ಕ್ಷೇಮಾಭಿವೃದ್ದಿ ತಾಲೂಕಾ ಘಟಕದಿಂದ ಮನವಿ, ಸರ್ಕಾರದ ವಿಶೇಷ ಪ್ಯಾಕೇಜ್‍ಗೆ ಒತ್ತಾಯ
ಮೂಡಲಗಿ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಶಿಲುಕಿದ ಕಮ್ಮಾರ ಮತ್ತು ಬಡಿಗತನ ವೃತ್ತಿ ನಿರತ ಕರಕುಶಲ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‍ವನ್ನು ಸರ್ಕಾರವು ಘೋಷಿಸಬೇಕೆಂದು ಮೂಡಲಗಿ ತಾಲ್ಲೂಕಾ ಲಿಂಗಾಯತ ಕಂಬಾರ ಮತ್ತು ಬಡಿಗೇರ ಕ್ಷೇಮಾಭಿವೃದ್ದಿ ಘಟಕದವರು ಸೋಮವಾರ ತಹಶೀಲ್ದಾರ ಡಿ.ಜಿ.ಮಹತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
. ಈ ಸಮುದಾಯಕ್ಕೆ ಯಾವದೆ ರೀತಿಯ ಪ್ಯಾಕೇಜ್ ಮತ್ತು ಸೌಲಭ್ಯವನ್ನು ಕಲ್ಪಿಸಿಕೊಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ನಮಗೆಲ್ಲ ನೋವು ತಂದಿದೆ. ಸಾಕಷ್ಟು ಜನ ಬಡವರಿದ್ದು, ತೊಂದರೆಯಲ್ಲಿರುವರು. ಲಾಕ್‍ಡೌನ್ ಸಂದರ್ಭದಲ್ಲಿ ಆಗಿರುವ ತೊಂದರೆಗೆ ಪ್ರತಿಯಾಗಿ ಸರ್ಕಾರವು ವಿವಿಧ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ನೀಡಿದೆ . ನಮ್ಮ ವರ್ಗಕ್ಕೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈಸಂದರ್ಭದಲ್ಲಿಎಸ್.ಕೆ.ಬಡಿಗೇರ,ಎಸ್.ಎಸ್.ಕಂಬಾರ,ಬಿ.ಎಸ್.ಬಡಿಗೇರ,ಎಮ್.ಆಯ್.ಬಡಿಗೇರ,ಎಸ್.ಆಯ್.ಬಡಿಗೇರ,ಬಸವರಾಜ ಬಡಿಗೇರ,ಕಲ್ಲಪ್ಪ ಕಂಬಾರ ಇನ್ನಿತರರು ಇದ್ದರು.