ಹೆಣ್ಣು ಸಮಾಜದ ಆದರ್ಶ ಪ್ರಜೆ -ಡಾ.ಸ್ನೇಹಾ ಆನಿಖಿಂಡಿ
ಮೂಡಲಗಿ : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಮಹಿಳೆ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾಳೆ. ಮಕ್ಕಳ ಪಾಲನೆ ಪೋಷಣೆಯಿಂದ ಹಿಡಿದು ಕುಟುಂಬ ನಿರ್ವಹಣೆ ಜೂತೆಗೆ ಸಮಾಜಮುಖಿ ಪ್ರಜೆಯಾಗಿ ಗುರ್ತಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿಕೊಳುತ್ತಿದ್ದಾಳೆ ಎಂದು ಮೂಡಲಗಿ ವೈದ್ಯಾಧಿಕಾರಿಯಾದ ಡಾ. ಸ್ನೇಹಾ ಆನಿಖಿಂಡಿ ಹೇಳಿದರು.
ಅವರು ಸ್ಥಳೀಯ ರೂರಲ್ ಡೆವಲಪ್ ಮೆಂಟ್ ಸೊಸೈಟಿಯ ಶ್ರೀ ವಿದ್ಯಾನಿಕೇತನ ಸಿ.ಬಿ.ಎಸ್.ಇ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ ಒಂದು ಹೆಣ್ಣು ಕುಟುಂಬದ ಕಣ್ಣು ಅವಳು ತನ್ನ ಪರಿವಾರವನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತಾಳೆಯೋ ಹಾಗೆ ತಮ್ಮ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳುವುದು ಅತಿ ಅವಶ್ಯಕವೆಂದರು.
ಇನ್ನೋರ್ವ ಅತಿಥಿ ವಿದ್ಯಾ ಸುರೇಶ ಗುಡಗುಡಿ ಮಾತನಾಡಿ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರ್ತಿಸಿಕೊಳ್ಳುವ ಸಮಾಜದ ಚಟುವಟಕೆಯಲ್ಲಿ ಭಾಗವಹಿಸಿವದು ಅವಶ್ಯವಿದ್ದು ನಮ್ಮ ಭಾರತೀಯ ಸಂಸ್ಕøತಿ ಮಹಿಳೆಯರಿಗೆ ವಿಶೇಷವಾದ ಗೌರವ ಮತ್ತು ಘನತೆಗಳನ್ನು ನೀಡಿದ್ದು ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು ಅವಶ್ಯವಿದೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪೂಜಾ ಸಂತೋಷ ಪಾರ್ಶಿ ಮಾತನಾಡಿ ಇಂದು ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಮಹಿಳೆಯರನ್ನು ಗೌರವಿಸುವ ಸಮಾಜ ನಿರ್ಮಾಣದ ಕಡೆಗೆ ಆಧ್ಯತೆ ನೀಡುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸ್ತೂರಿ ತಮ್ಮಣ್ಣ ಪಾರ್ಶಿಯ ರವರು ವಹಿಸಿಕೊಂಡು ಮಾತನಾಡಿ ಮಹಿಳೆಯರು ಅಂತರಾಷ್ಟ್ರೀಯ ಮಟ್ಟದವರೆಗೂ ಹಲವು ಸಾಧನೆಗಳನ್ನು ಮಾಡಿದ್ದಾಳೆ ಮಹಿಳೆ ಅಬಲೆ ಅಲ್ಲ ಸಬಲೆ ಇಂದಿನ ವಾಸ್ತವಿಕ ಪ್ರಪಂಚದಲ್ಲಿ ಮಹಿಳಾ ಸ್ಥಾನಮಾನಗಳು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಡಿ.ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣ ಪಾರ್ಶಿ ಶಾಲೆಯ ಪ್ರಾಂಶುಪಾಲರಾದ ಜೋಸೆಫ್ ಶಿವಲೀಲಾ ಶಿವಪ್ಪ ಚಂಡಕಿ ಮತ್ತು ಶಾಲಾ ಶಿಕ್ಷಕರು, ಪಾಲಕರು ಹಾಜರಿದ್ದರು.