Breaking News
Home / ತಾಲ್ಲೂಕು / *ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ*

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ*

Spread the love

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ*

ಮೂಡಲಗಿ : ಸ್ಥಳೀಯ ಪಶು ಆಸ್ಪತ್ರೆ ಸಿಬ್ಬಂದಿ ಶಂಕರ ಶ್ಯಾಬನ್ನವರ ರವರ ಜನ್ಮದಿನಾಚರಣೆಯನ್ನು ರೈತ ಬಾಂದವರ ಆಸೆಯದ ಮೇರೆಗೆ ಹಸಿರು ಕ್ರಾಂತಿ ಕಾರ್ಯಾಲಯದಲ್ಲಿ ಬುಧವಾರ ರಂದು ರಾತ್ರಿ ನಡೆಸಲಾಯಿತು.

ರೈತ ಬಾಂಧವರೆ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಶಂಕರ ಶ್ಯಾಬನ್ನವರ ಕೇಕ್ ಕತ್ತರಿಸಿ ರೈತ ಬಾಂದವರಿಗೆ ಕೃತಜ್ಞತೆ ಸಲ್ಲಿಸಿದರು.

ಹಿರಿಯ ಪತ್ರಕರ್ತ ಯಮುನಪ್ಪ ಸುಲ್ತಾನಪೂರ ಮಾತನಾಡಿ ಶಂಕರ ಅವರು ಚಿಕಿತ್ಸೆಗಾಗಿ ರೈತಬಾಂದವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.
ಪಶುಗಳಿಗೆ ಹಗಲು-ರಾತ್ರಿಯೆನ್ನದೆ ಯಾವುದೇ ಸಮಯದಲ್ಲಿ ರೈತರು ಫೋನ್ ಕರೆಗೆ   ಬಂದು ಸೂಕ್ತ ಚಿಕಿತ್ಸೆ ನೀಡುವ   ಸಂದರ್ಭಗಳಲ್ಲಿ ಮಳೆಗಾಲದ ಸಮಯದಲ್ಲಿ ಇಕ್ಕಟ್ಟಾದ ತೋಟದ ರಸ್ತೆಯಲ್ಲಿ ಸಂಚರಿಸುವಾಗ ಬೈಕ ಮೇಲಿಂದ ಬಿದ್ದು ಕೈಕಾಲು ಪೆಟ್ಟು ಹಚ್ಚಿಕೊಂಡ ಘಟನೆಗಳಾಗಿವೆ ಇನ್ನು ಮುಂದೆಯು ಶಂಕರ ಅವರು ತಮ್ಮ ವೃತ್ತಿ ಜೀವನದಲ್ಲಿ ಉಳಿದ ಹತ್ತು ವರ್ಷಗಳ ಅವಧಿಯಲ್ಲಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಮುಖ್ಯ ಉಪನಿರ್ದೇಶಕರಾದ ಎಂಬಿ ವಿಭೂತಿ, ಮತ್ತು ಮಹದೇವ ಕೌಜಲಗಿ ಇನ್ನುಳಿದ ಸಿಬ್ಬಂದಿ ಅವರು ಶುಭ ಹಾರೈಸಿದರು.

ರೈತರ ಪತ್ರಿಕೆಯಾದ ಹಸಿರು ಕ್ರಾಂತಿ ಕಾರ್ಯಾಲಯದಲ್ಲಿ ಅಭಿಮಾನಿ ರೈತರು ಮತ್ತು ಪತ್ರಕರ್ತರು ನನ್ನ ಹುಟ್ಟುಹಬ್ಬ ಆಚರಿಸಿದ ನನ್ನ ಸುದೈವವಾಗಿದೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ರೈತರಾದ ಈರಪ್ಪಾ ಢವಳೇಶ್ವರ, ಪತ್ರಕರ್ತರಾದ ಕೃಷ್ಣಾ ಗಿರೇನ್ನವರ, ಈಶ್ವರ ಢವಳೇಶ್ವರ, ಸುದಾಕರ ಉಂದ್ರಿ, ಭೀಮಶಿ ತಳವಾರ, ಅಲ್ತಾಫ್ ಹವಾಲ್ದಾರ ಸುರೇಶ ಎಮ್ಮಿ ಅನೇಕರು ಹಾಜರಿದ್ದರು.


Spread the love

About inmudalgi

Check Also

ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ

Spread the loveಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಅಪಾರ ಜನಸಮೂಹ ಮಧ್ಯೆ ಶುಕ್ರವಾರ ಸಂಜೆ ಜರುಗಿತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ