ಇಂದು ಬೆಳಗ್ಗೆ 63 ಹೊಸ ಪ್ರಕರಣಗಳು ಹಾಗೂ
ರಾಜ್ಯದಲ್ಲಿ ಇಂದು ಸಂಜೆ ಮತ್ತೆ 67 ಕೊರೊನಾ ಸೋಂಕು ಪತ್ತೆಯಾಗಿದ್ದು. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1462 ಕ್ಕೆ ಏರಿದೆ. ದಿನೇ ದಿನೇ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದರಿಂದ ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ.
ಬುಧವಾರ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ್ದು. ಇಂದು ಒಂದೇ ದಿನ ರಾಜ್ಯದಲ್ಲಿ ಮತ್ತೆ 67 ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ. ಇನ್ನು ಹಾಸನದಲ್ಲಿ 21 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ರೆ ಬೀದರ್‍ನಲ್ಲಿ 10 ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ.
ಇನ್ನು ಮಂಡ್ಯದಲ್ಲಿ 8, ಕಲಬುರ್ಗಿಯಲ್ಲಿ 7, ಉಡುಪಿಯಲ್ಲಿ 6, ಬೆಂಗಳೂರಿನಲ್ಲಿ 4, ರಾಯಚೂರನಲ್ಲಿ 4, ತುಮಕೂರಿನಲ್ಲಿ 4, ಯಾದಗಿರಿಯಲ್ಲಿ 1, ಉತ್ತರಕನ್ನಡದಲ್ಲಿ 1, ದಕ್ಷಿಣ ಕನ್ನಡದಲ್ಲಿ 1 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ.
ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೂಡ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲದೇ ಇರುವುದು ಕುಂದಾನಗರಿ ಜನತೆಯಲ್ಲಿ ಸ್ವಲ್ಪ ಸಮಾಧಾನದ ತಂದಿದೆ. ಇನ್ನು ರಾಜ್ಯದಲ್ಲಿ ಕೊರೊನಾಗೆ 41 ಸೋಂಕಿತರು ಬಲಿಯಾಗಿದ್ದಾರೆ. 556 ಸೋಂಕಿತರು ಗುಣಮುಖರಾಗಿದ್ದು. 861 ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.