‘ಅನ್ನದಾನವು ಶ್ರೇಷ್ಠ ದಾನವಾಗಿದೆ’
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 72ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಅವರು ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.
ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಸದಸ್ಯ ಸಂದೀಪ ಸೋನವಾಲಕರ ಅವರು ತಮ್ಮ ಪುತ್ರ ಸಿದ್ದಾಂತ ಹಾಗೂ ಸುಪ್ರೀತ ಸೋನವಾಲಕರ ಅವರು ತಮ್ಮ ಪುತ್ರ ಸೋಹನ್ ಇವರ ನಾಲ್ಕನೇ ವರ್ಷ ಹುಟ್ಟು ಹಬ್ಬದ ಪ್ರಯುಕ್ತವಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಎಚ್. ಸೋನವಾಲಕರ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಡಾ. ಖಾಜಿ, ಡಾ. ದೀಪಾ ಮಾಚಪ್ಪನ್ನವರ, ಶಿವಲಿಂಗ ಪಾಟೀಲ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಪ್ರತಿ ತಿಂಗಳದಲ್ಲಿ ಎರಡು ಬಾರಿ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿರುವೆವು, ಲಯನ್ಸ್ ಕ್ಲಬ್ ಸದಸ್ಯರಲ್ಲದೆ ಬೇರೆಯವರು ಸಹ ಅನ್ನದಾಸೋಹದ ಪ್ರಾಯೋಜಕತ್ವವಹಿಸಿಕೊಳ್ಳಬಹುದು, ಲಯನ್ಸ್ ಕ್ಲಬ್‍ವು ದಾಸೋಹದ ನಿರ್ವಹಣೆಯನ್ನು ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಶಿವಾನಂದ ಗಾಡವಿ, ಸುರೇಶ ನಾವಿ, ಡಾ. ಸಚಿನ ಟಿ, ಡಾ. ತಿಮ್ಮಣ್ಣ ಗಿರಡ್ಡಿ, ಶ್ರೀಶೈಲ್ ಲೋಕನ್ನವರ, ಗಿರೀಶ ಆಸಂಗಿ, ಮಹಾಂತೇಶ ಹೊಸೂರ ಇದ್ದರು.
350ಕ್ಕೂ ಅಧಿಕ ಸಂಖ್ಯೆಯಲ್ಲಿ ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.