ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಸನ್ಮಾನಿಸಿ ಬೀಳ್ಕೊಟ್ಟರು
ಶಿಕ್ಷಕರು ಸೇವಾ ಅನುಭವವನ್ನು ಸಮಾಜಕ್ಕೆ ನೀಡಬೇಕು
ಮೂಡಲಗಿ: ‘ಶಿಕ್ಷಣ ಸಂಸ್ಥೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿರುವ ಶಿಕ್ಷಕರ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೆಂಕಟೇಶ ಟಿ. ಸೋನವಾಲಕರ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಕಾಲೇಜುಗಳಿಂದ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಅಪೂರ್ವವಾದ ಅನುಭವವನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜವನ್ನು ಬೆಳೆಸಬೇಕು ಎಂದರು.
ನಿವೃತ್ತರಾಗಿರುವ ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಎ.ಪಿ. ರಡ್ಡಿ, ಪ್ರೌಢ ಶಾಲೆಯ ಸಹ ಶಿಕ್ಷಕರಾ ಸಿ.ಎಂ. ಹಂಜಿ, ಆರ್.ಬಿ. ಗಂಗರಡ್ಡಿ ಮಾತನಾಡಿ ಮೂಡಲಗಿ ಶಿಕ್ಷಣ ಸಂಸ್ಥೆಯು ನಮ್ಮ ಭವಿಷ್ಯ ರೂಪಿಸಿಕೊಳ್ಳಲು ನೆಲೆ ನೀಡಿತ್ತು. ನಾವು ಸಂಸ್ಥೆಯನ್ನು ಸದಾ ಸ್ಮರಣೀಸುತ್ತೇವೆ ಎಂದರು.
ನಿವೃತ್ತರಾದ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಎ.ಪಿ. ರಡ್ಡಿ, ಭೂಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಸಿ. ಪಾಟೀಲ, ಪ್ರೌಢ ಶಾಲಾ ಸಹ ಶಿಕ್ಷಕರಾದ ಸಿ.ಎಂ. ಹಂಜಿ, ಆರ್.ಬಿ. ಗಂಗರಡ್ಡಿ ಮತ್ತು ಪ್ರಾಥಮಿಕ ಶಾಲೆಯ ಬಿ.ಎಂ. ಬೋರಗಲ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ನಿರ್ದೇಶಕರಾದ ಬಿ.ಎಚ್. ಸೋನವಾಲಕರ, ಪ್ರದೀಪ ಲಂಕೆಪ್ಪನ್ನವರ, ಆರ್.ಬಿ. ನಂದಗಾಂವಿ, ಸಂದೀಪ ಸೋನವಾಲಕರ, ಪ್ರಾಚಾರ್ಯರಾದ ಪ್ರೊ. ಸಂಗಮೇಶ ಗುಜಗೊಂಡ, ಪ್ರೊ. ಎಸ್.ಡಿ. ತಳವಾರ, ಕೆ.ಎಸ್. ಹೊಸಟ್ಟಿ, ಎಂ.ಕೆ. ಕಂಕಣವಾಡಿ ಇದ್ದರು.
ಪ್ರೊ. ಜಿ.ವಿ. ನಾಗರಾಜ ನಿರೂಪಿಸಿದರು.