ಮೂಡಲಗಿ: ಇಲ್ಲಿಯ ಪ್ರತಿಷ್ಠಿತ ದಿ. ಮೂಡಲಗಿ ಕೋಆಪರೇಟಿವ್ ಬ್ಯಾಂಕ್‍ವು 2022ರ ಮಾರ್ಚ ಅಂತ್ಯಕ್ಕೆ ರೂ. 1.64 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಜಿ. ಢವಳೇಶ್ವರ ತಿಳಿಸಿದ್ದಾರೆ.
ಬ್ಯಾಂಕ್ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ವಿವಿಧ ತೆರನಾದ ನಿಧಿಗಳ ಕ್ರೋಢಿಕರಣಗೊಳಿಸಿ ಹಾಗೂ ಆದಾಯ ತೆರಿಗೆ ತೆಗೆದು ನಿವ್ವಳ ರೂ. 61.20 ಲಕ್ಷ ಲಾಭ ಬಂದಿದೆ ಎಂದು ತಿಳಿಸಿದ್ದಾರೆ.
ಸದ್ಯ ಬ್ಯಾಂಕ್‍ವು ರೂ. 2.04 ಕೋಟಿ ಶೇರು ಬಂಡವಾಳ, ರೂ. 5.24 ಕೋಟಿ ನಿಧಿಗಳು, ರೂ. 108.92 ಕೋಟಿ ಠೇವುಗಳು, ರೂ. 34.78 ಕೋಟಿ ಗುಂತಾವಣಿಗಳು ಹಾಗೂ ರೂ. 120 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ರೂ. 71.92 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡಿದ್ದು, ಶೇ.1.38 ನಿವ್ವಳ ಎನ್‍ಪಿಎ ಹೊಂದಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್‍ವು ಆಧುನಿಕತೆಯ ಎಲ್ಲ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಿದೆ. ಸದ್ಯ ನಾಲ್ಕು ಶಾಖೆಗಳು ಇದ್ದು ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‍ನ ಉಪಾಧ್ಯಕ್ಷ ನವೀನ ಬಡಗನ್ನವರ, ನಿರ್ದೇಶಕರಾದ ಡಾ. ಕೆ.ವಿ. ದಂತಿ, ಶಿವಲಿಂಗಪ್ಪ ಗಾಣಿಗೇರ, ರುದ್ರಪ್ಪ ವಾಲಿ, ರಾಚಯ್ಯ ನಿರ್ವಾಣಿ, ವೀರಪ್ಪ ಬೆಳಕೂಡ, ಮಹದ್ಮರಫೀಕ ತಾಂಬೋಳಿ, ಹರೀಶ ಅಂಗಡಿ, ಸುಶೀಲಾ ಸತರಡ್ಡಿ, ಪ್ರಭಾವತಿ ಮುಧೋಳ, ಉಜಾಲಾ ಪೋಳ, ಪ್ರಧಾನ ವ್ಯವಸ್ಥಾಪಕ ಜಿ.ವಿ. ಬುದ್ನಿ, ಸಹಾಯಕ ವ್ಯವಸ್ಥಾಪಕ ಎಂ.ಬಿ. ಮಡಿವಾಳರ, ಹಳ್ಳೂರ ಶಾಖೆಯ ವ್ಯವಸ್ಥಾಪಕ ಸಿ.ಬಿ. ಢವಳೇಶ್ವರ ಉಪಸ್ಥಿತರಿದ್ದರು.