Breaking News
Home / Recent Posts / ಸಹಕಾರಿ ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಪೂರಕವಾಗಲಿವೆ – ಸಂಸದ ಈರಣ್ಣ ಕಡಾಡಿ ಕರೆ.

ಸಹಕಾರಿ ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಪೂರಕವಾಗಲಿವೆ – ಸಂಸದ ಈರಣ್ಣ ಕಡಾಡಿ ಕರೆ.

Spread the love

 

ಮೂಡಲಗಿ: ಸದೃಡ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಸ್ಥೆಗಳ ಪಾತ್ರ ಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಕಲ್ಲೋಳಿಯ ಶಿವಾ ಕೋ ಆಫ್ ಕ್ರೇಡಿಟ್ ಸೋಸಾಯಿಟಿ ಲಿ ಕಲ್ಲೋಳಿ ಇದರ ಪ್ರಥಮ ಶಾಖೆಯನ್ನು ಲೋಳಸೂರ ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸಹಕಾರಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರು ಆಸಕ್ತಿ ಹೊಂದಿದರೆಂದರಲ್ಲದೆ ಕೇಂದ್ರ ಸಹಕಾರ ಸಚಿವ ಅಮಿತ ಶಾ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ಬಲ ನೀಡಲಿದ್ದಾರೆಂದು ಆಶಯ ವ್ಯಕ್ತಪಡಿಸಿದರು.

ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಾಕಾರಿ ಸಂಸ್ಥೆಗಳು. ಸಹಕಾರಿ ಸಂಸ್ಥಗಳ ಗ್ರಾಹಕರು ತಾವು ಪಡೆದುಕೊಂಡ ಸಾಲವನ್ನು ಕಾಲಕಾಲಕ್ಕೆ ತುಂಬಿ ಮರಳಿ ಪಡೆಯಬೇಕೆಂದು ಸಲಹೆ ನೀಡಿದ ಅವರು ಮುಂಬರುವ ದಿನಗಳಲ್ಲಿ ಸಹಕಾÀರಿ ಕ್ಷೇತ್ರ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ ಸಹಕಾರಿ ನಿರ್ದೇಶಕರು, ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ಅಧ್ಯಕ್ಷ ಗಿರಮಲ್ಲ ಸವಸುದ್ದಿ ಮಾತನಾಡಿ ಸಹಕಾರಿಯು ಪ್ರಗತಿ ಪಥದಲ್ಲಿ ಸಾಗಿದ್ದು 961 ಸದಸ್ಯರನ್ನು ಹೊಂದಿ ರೂ 27.89 ಲಕ್ಷ ಶೇರು ಬಂಡವಾಳ ಹೊಂದಿದೆ, ಗ್ರಾಹಕರಿಂದ ರೂ 3.94 ಕೋಟಿ ಠೇವುಗಳನ್ನು ಸಂಗ್ರಹಿಸಿದ್ದು, ಸದಸ್ಯರಿಗೆ ರೂ 4.87 ಕೋಟಿ ಸಾಲ ವಿತರಿಸಲಾಗಿದೆ, ಸಂಸ್ಥಯು 4.88 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು 2020 – 21 ಸಾಲಿನಲ್ಲಿ ರೂ 18.48 ಲಕ್ಷ ಲಾಭ ಗಳಿಸಿದೆ ಎಂದರಲ್ಲದೆ ಸಹಕಾರಿಯು ಶೀಘ್ರದಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯಲಾಗುವುದು ಎಂದರು.
ಗೋಕಾಕ ಶೂನ್ಯ ಸಂಪಾಧನ ಮಠದ ಪೂಜ್ಯ ಮುರಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿ ಎಸ್ ಎಮ್ ರಂಜನಗಿ, ರಾಜು ಬೈರುಗೋಳ, ವಿಠ್ಠಲ ಪಾಟೀಲ, ಮನು ಗಡಾದ, ಯಮನಪ್ಪ ಭಾಗಾಯಿ, ಸಂಸ್ಥೆಯ ಉಪಾಧ್ಯಕ್ಷÀ ಶಿವಪ್ಪ ಮರ್ದಿ, ಬಾಳಪ್ಪÀ ಕಡಾಡಿ, ಶಿವಾನಂದ ಹೆಬ್ಬಾಳ, ಅಶೋಕ ಮಕ್ಕಳಗೇರಿ, ಮಹಾದೇವ ಖಾನಾಪೂರ, ಅಜೀತ ಚಿಕ್ಕೋಡಿ, ಮಾರುತಿ ಹೂಗಾರ, ಬಸವರಾಜ ಗೊರೋಶಿ, ಮಹಾಂತೇಶ ಬೆಳಕೂಡ, ಚಂದು ಕಲಾಲ, ವಸಂತ ತಹಸಿಲ್ದಾರ ಸೇರಿದಂತೆ ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.
ಶಶಿಕಾಂತ ಕಡಲಗಿ ಸ್ವಾಗತಿಸಿದರು, ಸಿದ್ದಪ್ಪ ಮಾಯನ್ನವರು ಕಾರ್ಯಕ್ರಮ ನಿರೂಪಿಸಿದರು, ಪರಸಪ್ಪ ವಗ್ಗ ವಂದಿಸಿದರು,


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ