ಶುಕ್ರವಾರ ಕೂಡ ಮಹಾಮಾರಿ ಕೊರೊನಾ ರಾಜ್ಯಕ್ಕೆ ಬಿಗ್ ಶಾಕ್ ನೀಡಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 138 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು. ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ. ಹೌದು ಶುಕ್ರವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಹೊರಡಿಸಿದ್ದು. ಇಂದು ಒಂದೇ ದಿನ 138 ಕೊರೊನಾ ಕೇಸ್‍ಗಳು ಕಂಡು ಬಂದಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯ 75 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿದೆ. ಈತ ಜಾರ್ಖಂಡ್‍ನ ಜೈನ ಧರ್ಮಿಯರ ತೀರ್ಥಕ್ಷೇತ್ರಕ್ಕೆ ತೆರಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಈ ಮೂಲಕ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಒಂದೇ ದಿನ 53 ಕೊರೊನಾ ಸೋಂಕು ಪತ್ತೆಯಾಗಿದ್ದರೆ, ಹಾಸನ್ 18, ರಾಯಚೂರಿನಲ್ಲಿ 10, ತುಮಕೂರು 8, ಮಂಡ್ಯ 8, ವಿಜಯಪುರ 7, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 5, ಚಿಕ್ಕಮಗಳೂರ 5, ಹಾವೇರಿ 3, ಬೀದರ್ 6, ದಾವಣಗೆರೆ 3, ಉಡುಪಿ 3, ಯಾದಗಿರಿ 2, ಧಾರವಾಡ 2, ಶಿವಮೊಗ್ಗ 2, ಬಾಗಲಕೋಟೆ 1, ಚಿತ್ರದುರ್ಗ 1, ಉತ್ತರಕನ್ನಡ 1, ದಕ್ಷಿಣ ಕನ್ನಡದಲ್ಲಿ 1 ಕೊರೊನಾ ಸೋಂಕು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದ್ದು. ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ
Home / ತಾಲ್ಲೂಕು / ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …