ಶ್ರೀನಿವಾಸ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟನೆ
ಮೂಡಲಗಿ: ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಮುಂದಿನ ವರ್ಷದಿಂದ ಕಣ್ಣಿನ ತಪಾಸಣೆ ಜೋತೆಗೆ ಹೃದಯ ರೋಗ ಮತ್ತು ಮಧು ಮೇಹ ಕಾಯಿಲ್ಲೆಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಶ್ರೀನಿವಾಸ ಶಾಲೆಯ ಚೇರಮನ್ನ ಡಾ. ರಂಗಣ್ಣಾ ಸೋನವಾಲ್ಕರ ಹೇಳಿದರು.
ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ದಿ.ನಿಂಗಪ್ಪ ರ.ಸೋನವಾಲಕರ ಅವರ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪ್ರೇಮಿ ಹಾಗೂ ಸಮಾಜಿಕ ಕಳಕಳಿಯುಳ್ಳ ನಮ್ಮ ತಂದೆಯವರ ಕನಸಿನಂತೆ ಮೂಡಲಗಿ ಪಟ್ಟಣದಲ್ಲಿ ಸುಸಜ್ಜಿತ ಶಾಲೆಯನ್ನು ತೇರೆಯುವ ಮೂಲಕ ಈ ಶಾಲೆಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿರು ಉಚಿತ ತಪಾಸಣಾ ಶಿಬಿರವನ್ನು ಮೂಡಲಗಿ ಮತ್ತು ಸುತ್ತಮೂತಲಿನ ಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮನುಷ್ಯನ ಜೀವನದಲ್ಲಿ ಕಣ್ಣು ಬಹಳ ಮುಖ್ಯವಾಗಿದು, ಕಣ್ಣಿನ ರಕ್ಷಣೆಯ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶ ನೀಡುತ್ತಿರಬೇಕು. ದೃಷ್ಟಿ ದೋಷವಿರುವ ಮಕ್ಕಳನ್ನು ಗುರತಿಸಿ ತಪಾಸಣೆ ಮಾಡಿಸಬೇಕು, ಪ್ರತಿಯೊಬ್ಬರು ಹಾಗಾಗ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕು. ಹಸಿರು ಸೊಪ್ಪು ಮತ್ತು ಮಿಟಮಿನ್-ಎ ಇರುವ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು-ಹೆಚ್ಚು ನೀರು ಕುಡಿದು ಕಣ್ಣನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕೆಂದರು.
ಶಾಲೆಯ ಪ್ರಾಚಾರ್ಯ ಮನೋಜ ಭಟ್ ಮಾತನಾಡಿ, ಡಾ.ರಂಗಣ್ಣ ನಿಂಗಪ್ಪ ಸೋನವಾಲ್ಕರ ವೃತ್ತಿಯಿಂದ ವೈದ್ಯರಾದರೂ ಕೂಡಾ ಅವರು ತಮ್ಮ ತಂದೆಯ ಕನಸಿನಂತೆ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನಿಯವಾದದು ಎಂದರು.
ವಿಜಯಪೂರದ ಬಿ.ಎಂ.ಪಾಟೀಲ ಆಸ್ಪತ್ರೆಯ ಕಣ್ಣಿನ ತಜ್ಞರಾದ ಡಾ. ಗಾಯತ್ರಿ ಎಂ, ಡಾ.ಬಿಹಾಗ್, ಡಾ ವೈಷ್ಣವಿ ಪಾಟೀಲ, ಡಾ.ಅಮೀತ್ ಗುಪ್ತಾ, ಡಾ.ಅಮನಕುಮಾರ ಅವರು ಕಣ್ಣು ತಪಾಸಿಸಿದರು.
ಶಿಕ್ಷಕಿ ಸ್ಮಿತಾ ಪತ್ತಾರ ನಿರೂಪಿಸಿದರು, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ ವಂದಿಸಿದರು,
IN MUDALGI Latest Kannada News